ಮುಷ್ಕರ ನಿರತ 48 ಸಾವಿರ ಸಾರಿಗೆ ನೌಕರರ ವಜಾ! ತೆಲಂಗಾಣದಲ್ಲಿ ಕೆಸಿಆರ್ ಸರ್ವಾಧಿಕಾರಿ ವರಸೆ.

ಕರಾವಳಿ ಕರ್ನಾಟಕ ವರದಿ

ಹೈದರಾಬಾದ್:
ತೆಲಂಗಾಣ ಸಿಎಂ ಕೆ.ಚಂದ್ರಶೇಕರ್ ರಾವ್ ಮುಷ್ಕರ ನಿರತ ರಾಜ್ಯ ರಸ್ತೆ ಸಾರಿಗೆಯ ಬರೋಬ್ಬರಿ 48000 ನೌಕರರನ್ನು ಸೇವೆಯಿಂದಲೇ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಕೆಸಿಆರ್ ಅವರ ಈ ಕ್ರಮ ಸರ್ವಾಧಿಕಾರದ ಪ್ರತೀಕವಾಗಿದೆ ಎಂದು ವ್ಯಾಪಕ ಟೀಕೆಗಳು ಕೇಳಿಬಂದಿದ್ದು ವಜಾಗೊಂಡ ನೌಕರರು ನಿರಶನ ಆರಂಭಿಸಿದ್ದಾರೆ.

ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ 48000 ನೌಕರರನ್ನು ಒಂದೇ ಬಾರಿಗೆ ಕೆಸಿಆರ್ ಸರ್ಕಾರ ವಜಾಗೊಳಿಸಿದ್ದು, ಸಿಎಂ ಅವರ ಈ ಹಿಟ್ಲರ್ ನಡೆಯ ವಿರುದ್ಧ ನೌಕರರು ಬೀದಿಗಿಳಿದಿದ್ದಾರೆ. ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಶುಕ್ರವಾರದಿಂದಲೂ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಭಾನುವಾರ ಇವರಿಗೆಲ್ಲಾ ಭಾರಿ ಶಾಕ್ ನೀಡಿದ ಸರ್ಕಾರ ಬರೋಬ್ಬರಿ 48000 ಮಂದಿ ನೌಕರರನ್ನು ಕೆಲಸದಿಂದಲೇ ವಜಾಗೊಳಿಸಿದೆ.

ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ನಿನ್ನೆ ಸಂಜೆ ಘೋಷಣೆ ಮಾಡಿರುವಂತೆ 1200 ಮಂದಿ ಮಾತ್ರವೇ ರಸ್ತೆ ಸಾರಿಗೆ ಇಲಾಖೆಯಲ್ಲಿ ನೌಕರರಿದ್ದು, ಸಂಜೆ 6 ಗಂಟೆ ಒಳಗೆ ಯಾರು ಕೆಲಸಕ್ಕೆ ಹಾಜರಾಗುತ್ತಾರೊ ಅವರನ್ನು ಬಿಟ್ಟು ಉಳಿದೆಲ್ಲವರನ್ನೂ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಹೇಳಿದ್ದರು.

49,340 ನೌಕರರು ಪ್ರತಿಭಟನೆಯಲ್ಲಿದ್ದರು ತೆಲಂಗಾಣ ರಸ್ತೆ ಸಾರಿಗೆಯ ನೌಕರರ ಸಂಘದ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ 49,340 ಮಂದಿ ನೌಕರರು ಭಾಗವಹಿಸಿದ್ದರು. ಇದರಲ್ಲಿ 48,000 ನೌಕರರನ್ನು ಸೇವೆಯಿಂದ ಏಕಾ-ಏಕಿ ವಜಾ ಮಾಡಲಾಗಿದೆ.

ಸರ್ಕಾರಿ ನೌಕರರ ದರ್ಜೆಗಾಗಿ ಪ್ರತಿಭಟಿಸಿದ್ದ ನೌಕರರು ರಸ್ತೆ ಸಾರಿಗೆಯನ್ನು ಸರ್ಕಾರದ ಅಡಿಗೆ ತೆಗೆದುಕೊಂಡು, ರಸ್ತೆ ಸಾರಿಗೆ ನೌಕರರಿಗೆ ಸರ್ಕಾರಿ ನೌಕರ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇದರ ಜೊತೆಗೆ ಏಪ್ರಿಲ್ 2017 ರಿಂದ ಬಾಕಿ ಉಳಿದಿರುವ ಸಂಬಳ ಪರೀಷ್ಕರಣೆಯನ್ನು ಮಾಡುವಂತೆ ಹಾಗೂ ನೌಕರರ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಲೆಂದು ಹೊಸ ನೇಮಕಾತಿ ಮಾಡುವಂತೆ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದರು.

ಪ್ರತಿಭಟನಾಕಾರರೊಂದಿಗೆ ಮಾತುಕತೆಯೂ ಇಲ್ಲ
ಎಂ ಸಿಎಂ ಸೂಚನೆಯಂತೆ ಭಾನುವಾರ ಬೆಳಿಗ್ಗೆ ಆದೇಶವನ್ನು ಹೊರಡಿಸಲಾಗಿದ್ದು, ಪ್ರತಿಭಟನಾಕಾರರೊಂದಿಗೆ ಯಾವುದೇ ಮಾತುಕತೆಯನ್ನು ಸರ್ಕಾರ ನಡೆಸುವುದಿಲ್ಲವೆಂದು ಸಹ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ