ಕುಂದಾಪುರ: ಟ್ಯಾಂಕರ್-ಕಾರು-ಬೈಕ್ ನಡುವೆ ಭೀಕರ ಅಪಘಾತ. ಕಾರು ಚಾಲಕ ಗಂಭೀರ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಇಲ್ಲಿಗೆ ಸಮೀಪದ ಹೆಮ್ಮಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ನಡೆದ ಅಪಘಾತದಲ್ಲಿ ಕಾರು ಚಾಲಕ ಮತ್ತು ಬೈಕ ಸವಾರನೋರ್ವ ಗಂಭೀರಗಾಯಗೊಂಡಿದ್ದಾರೆ.

ಭಾನುವಾರ ರಾತ್ರಿ ಭಾರೀ ಗಾಳಿ ಮಳೆ ಸುರಿಯುವಾಗ ಈ ಅಪಘಾತ ನಡೆದಿದೆ. ಹೆಮ್ಮಾಡಿಯತ್ತ ಸಾಗುತ್ತಿದ್ದ ಕಾರು ಕುಂದಾಪುರದತ್ತ ಸಾಗುತ್ತಿದ್ದ ಬುಲೆಟ್ ಟ್ಯಾಂಕರ್‌ಗೆ ಢಿಕ್ಕಿಯಾಗಿದೆ. ಈವೇಳೆ ಕಾರು ಬೈಕ್‌ಗೂ ತಾಗಿದೆ.

ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರನ್ನು ಚಲಾಯಿಸುತ್ತಿದ್ದ ದೇವಲ್ಕುಂದ ಸಮೀಪದ ನಿವಾಸಿ ಸಾತ್ವಿಕ್ ಶೆಟ್ಟಿ (22) ಗಂಭೀರ ಗಾಯಗೊಂಡಿದ್ದಾರೆ. ಬೈಕ್ ಸವಾರನೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯ್ಗೊಂಡು ಅಸ್ಪತ್ರೆಗೆ ದಾಖಲಾಗಿದ್ದಾನೆ. ಬೈಕ್ ಸವಾರ ಬಾದಾಮಿ ಕಡೆಯ ವ್ಯಕ್ತಿ ಎಂದು ಹೇಳಲಾಗುತ್ತಿದ್ದು ಹೆಚ್ಚಿನ ವಿವರಗಳು ಇನ್ನಷ್ಟೆ ಸಿಗಬೇಕಿದೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ