ಕಾಶ್ಮೀರದಲ್ಲಿ ನಾಗರಿಕರಿಗೆ ನಿರ್ಬಂಧ ವಿರೋಧಿಸಿ ಐಎಎಸ್ ಅಧಿಕಾರಿ ರಾಜೀನಾಮೆ

ಕರಾವಳಿ ಕರ್ನಾಟಕ ವರದಿ

ನವದೆಹಲಿ
: 370 ಕಾಶ್ಮೀರದಲ್ಲಿ ಮೋದಿ ಸರ್ಕಾರ ವಿಧಿಸಿರುವ ನಿರ್ಬಂಧವನ್ನು ವಿರೋಧಿಸಿದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ 370 ವಿಧಿಯನ್ನು ಮೋದಿ ಸರ್ಕಾರ ಹಿಂಪಡೆದ ಬಳಿಕ ಕಣಿವೆ ರಾಜ್ಯದಲ್ಲಿ ನಿರ್ಬಂಧ ವಿಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲಾಗಿದೆ ಎಂದು ಕಣ್ಣನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಗೋಪಿನಾಥನ್ ಸದ್ಯ ದಾದ್ರ ಮತ್ತು ನಗರ್ ಹವೇಲಿ ಕೇಂದ್ರಾಡಳಿತ ಪ್ರದೇಶದ ಪ್ರಮುಖ ಹುದ್ದೆಯಲ್ಲಿದ್ದಾರೆ. 2012ರ ಬ್ಯಾಚಿನ ಐಎಎಸ್ ಅಧಿಕಾರಿ ಕಣ್ಣನ್ 2012ರ ಬ್ಯಾಚಿನ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರು ಗೃಹ ಇಲಾಖೆಗೆ ತಮ್ಮ ರಾಜೀನಾಮೆ ಪತ್ರವನ್ನು ಕಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಮೂಲ ಹಕ್ಕುಗಳನ್ನು ಕಳೆದ 20 ದಿನಗಳಿಂದ ಹತ್ತಿಕ್ಕಲಾಗಿದೆ. ಕಲಂ 370ರದ್ದು ಪಡಿಸಿದ್ದು ದೊಡ್ಡ ವಿಷಯವಲ್ಲ, ವಿಶೇಷ ಅಧಿಕಾರ ಹಿಂಪಡೆದಿದ್ದರ ಪರ ಅಥವಾ ವಿರೋಧ ಚರ್ಚೆ, ವಿರೋಧ,, ಪ್ರತಿಭಟನೆ ನಿರೀಕ್ಷಿತ, ಇದು ಅವರ ಮೂಲ ಹಕ್ಕು, ಆದರೆ, ಸಂವಿಧಾನ ನೀಡಿರುವ ಮೂಲಹಕ್ಕನ್ನು ಕಸಿದುಕೊಳ್ಳುವ ಯತ್ನಕ್ಕೆ ಪ್ರತಿರೋಧ ರೂಪವಾಗಿ ನಾನು ರಾಜೀನಾಮೆ ನೀಡಿದ್ದೇನೆ" ಎಂದು ಕಣ್ಣನ್ ಹೇಳಿದ್ದಾರೆ.

ಈ ಹಿಂದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ರೂಪವಾಗಿ ಐಎಎಸ್ ಹುದ್ದೆಯನ್ನು ಷಾ ಫಸಲ್ ತೊರೆದಿದ್ದನ್ನು ಇಲ್ಲಿ ಸ್ಮರಿಸಬಹುದು. ನಾಗರಿಕ ಸೇವಾ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಮೊದಲ ಕಾಶ್ಮೀರಿ ಫಸಲ್ ಅವರು ಇತ್ತೀಚೆಗೆ ಶ್ರೀನಗರಕ್ಕೆ ತೆರಳಲು ಯತ್ನಿಸುತ್ತಿದ್ದಂತೆ ಅವರನ್ನು ಬಂಧಿಸಿ, ಗೃಹಬಂಧನಕ್ಕೊಳಪಡಿಸಲಾಗಿತ್ತು

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ