ಪಾಕಿಸ್ತಾನಕ್ಕೆ ಹೋಗುತ್ತೇನೆ, ಸಾಧ್ಯವಾದರೆ ತಡೆಯಿರಿ: ಬಿಗ್ ಬಾಸ್ ವಿಜೇತೆ ಸವಾಲು

ಕರಾವಳಿ ಕರ್ನಾಟಕ ವರದಿ

ಮುಂಬೈ:
ಪಾಕಿಸ್ತಾನದ ಕರಾಚಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಕಲಾವಿದರ ಫೇಡರೇಶನ್‌ನಿಂದ ನಿಷೇಧಕ್ಕೆ ಒಳಗಾಗಿರುವ ಗಾಯಕ ಮಿಖಾ ಸಿಂಗ್ ಪರವಾಗಿ ಬಿಗ್ ಬಾಸ್ ವಿಜೇತೆ ಶಿಲ್ಪಾ ಶಿಂಧೆ ಬೆಂಬಲಕ್ಕೆ ಮುಂದೆ ಬಂದಿದ್ದಾರೆ.

ಹಿಂದಿಯ ಬಿಗ್ ಬಾಸ್ ಹನ್ನೊಂದರ ವಿಜೇತೆ ಮತ್ತು 'ಭಾಭೀ ಜೀ ಘರ್ ಪೆ ಹೇ' ಖ್ಯಾತಿಯ ಶಿಲ್ಪಾ ಶಿಂಧೆ ಫಿಲಂ ಫೆಡರೇಷನ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನದಲ್ಲಿ ಹಾಡಿದ್ದಕ್ಕೆ ಗಾಯಕ ಮಿಕಾ ಸಿಂಗ್‌ಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ  ಶಿಂಧೆ,  ನಾನು ಪಾಕಿಸ್ತಾನಕ್ಕೆ ಹೋಗುತ್ತೇನೆ, ಸಾಧ್ಯವಾದರೆ ತಡೆಯಿರಿ ಎಂದು ಫೆಡರೇಷನ್‌ಗೆ ಸವಾಲು ಎಸೆದಿದ್ದಾರೆ.

ದೇಶದ ಮೇಲಿನ ಪ್ರೀತಿ ತೋರಿಸಲು ಪಾಕಿಸ್ತಾನ ಮುರ್ದಾಬಾದ್ ಎಂದು ಹೇಳಬೇಕೇ ಎಂದು ಪ್ರಶ್ನಿಸಿರುವ ಶಿಂಧೆ, "ಮಿಖಾ ಸಿಂಗ್ ಉತ್ತಮ ಗಾಯಕರಾಗಿದ್ದಾರೆ. ಅದಕ್ಕಾಗಿ ಅವರಿಗೆ ಪಾಕಿಸ್ತಾನದಲ್ಲಿ ಕಾರ್ಯಕ್ರಮ ನೀಡುವ ಅವಕಾಶ ಸಿಕ್ಕಿತು" ಎಂದಿದ್ದಾರೆ.

ಪಾಕಿಸ್ತಾನಕ್ಕೆ ಹೋಗಲು ಭಾರತ ಸರಕಾರ ವೀಸಾ ನೀಡಿದ್ದಲ್ಲವೇ ಎಂದು ಹೇಳಿರುವ ಶಿಂಧೆ ಮಿಖಾ ಸಿಂಗ್ ಅಲ್ಲಿ ಕಾರ್ಯಕ್ರಮ ನೀಡಿದ್ದು, ನಮ್ಮ ದೇಶಕ್ಕಾಗದ ಹೆಮ್ಮೆ ಎಂದು ನಾವು ಭಾವಿಸಬೇಕು" ಎಂದು ಹೇಳಿದ್ದಾರೆ.

ನಾವು ನಮ್ಮ ದೇಶವನ್ನು, ಪ್ರೀತಿಸುತ್ತೇವೋ ಅಥವಾ ದ್ವೇಷಿಸುತ್ತೇವೋ ಎನ್ನುವುದನ್ನು ಇನ್ನೊಬ್ಬರು ನಿರ್ಧರಿಸುವುದಲ್ಲ" ಎಂದು ಶಿಂಧೆ ಹೇಳಿದ್ದಾರೆ.

ಗಾಯಕ ಮಿಖಾ ಸಿಂಗ್, ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಹತ್ತಿರದ ಸಂಬಂಧಿಯೊಬ್ಬರ ಮದುವೆಯ ಕಾರ್ಯಕ್ರಮ ನೀಡಿದ್ದರು.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ