ಕೊಂಕಣಿ ಖಾರ್ವಿ ಸಮಾಜದ ವತಿಯಿಂದ ಸಮುದ್ರ ಪೂಜೆ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ಪರವಾಗಿ ಶ್ರೀ ಮಹಾಕಾಳಿ ದೇವಳದ ವತಿಯಿಂದ ವರ್ಷಂಪ್ರತಿ ಜರಗುವ ಸಮುದ್ರ ಪೂಜೆಯು ದೇವಳದ ಅಧ್ಯಕ್ಷರಾದ ಶ್ರೀಯುತ ಪ್ರಕಾಶ್ ಆರ್. ಖಾರ್ವಿ ಮುಂದಾಳುತನದಲ್ಲಿ ಇತ್ತೀಚೆಗೆ ಕೋಡಿ ಕಿನಾರೆಯಲ್ಲಿ ಸಾಂಪ್ರದಾಯಿಕ ವಾಗಿ ಜರುಗಿತು.

ದೇವಳದ ಮೊಕ್ತೇಸರರು, ಆಡಳಿತ ಮಂಡಳಿಯ ಸದಸ್ಯರು, ಮಹಾಕಾಳಿ ಮಹಿಳಾ ಮಂಡಳಿಯ ವಸಂತಿ ಮೋಹನ್ ಸಾರಂಗ್ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಶ್ರೀ ಸುನೀಲ್ ಖಾರ್ವಿ ತಲ್ಲೂರು ಸಹಿತ ಹಲವಾರು ಭಕ್ತಾಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ