ಉಳ್ಳೂರು-ಕಂದಾವರ ಶಾಲೆ: ಅದ್ದೂರಿಯ ಸ್ವಾತಂತ್ರ್ಯೋತ್ಸವದಲ್ಲಿ ಯೋಧರಿಗೆ ಗೌರವಾರ್ಪಣೆ

ಕರಾವಳಿ ಕರ್ನಾಟಕ ವರದಿ

ಕುಂದಾಪುರ
: "ಸೇವೆಗೆ ಸೇರುವುದು ಅತ್ಯಂತ ಹೆಮ್ಮೆಯ ಸಂಗತಿ ಹಾಗೂ ದೇಶಕ್ಕಾಗಿ ಮಡಿಯುವುದು ಕೂಡಾ ಪುಣ್ಯದ ಕೆಲಸ. ದೇಶ ಸೇವೆ ಸೈನಿಕರ ಕೆಲಸ ಮಾತ್ರ ಆಗಿರದೆ, ಪ್ರತಿಯೊಬ್ಬ ಪ್ರಜೆಯೂ ತಮ್ಮ ಪ್ರತಿನಿತ್ಯದ ಜೀವನಕ್ರಮದಲ್ಲಿ ರಾಷ್ಟ್ರಹಿತದ ಕೆಲಸಗಳನ್ನು ಮಾಡುವುದು ಕೂಡಾ ರಾಷ್ಟ್ರಪ್ರೇಮವಾಗಿರುತ್ತದೆ. ಆಗ ಈ ಸ್ವಾತಂತ್ರ್ಯ ದಿನಾಚರಣೆ ಪ್ರತೀ ಮನೆಯ ಹಬ್ಬವಾಗುತ್ತದೆ" ಎಂದು ಉಳ್ಳೂರು ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಯೋಧರಾದ ಶ್ರೀ ರಾಜಶೇಖರ ಶೇರೆಗಾರ್ ಅರಳೀಕಟ್ಟೆ ಮನೆ ಇವರು ತಿಳಿಸಿದರು.

ಇವರು ಆಗಸ್ಟ್ 15ರಂದು ಉಳ್ಳೂರು-ಕಂದಾವರ ಸರಕಾರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಹಾಗೂ ಯೋಧರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲೆಯಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗಿದ್ದು, ಉಳ್ಳೂರು ಕಾಡಿನಕೊಂಡದ 'ತಾಯಿ' ಸನ್ನಿಧಿಯ ಶ್ರೀ ವೇದಮೂರ್ತಿ ಕೃಷ್ಣಮೂರ್ತಿ ಪುರಾಣಿಕ ಇವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಾಲೆಯ ಹಳೆ ವಿದ್ಯಾರ್ಥಿ ರಾಜಶೇಖರ್ ಶೇರೆಗಾರ್ ಇವರೊಂದಿಗೆ ವಿದ್ಯಾರ್ಥಿಗಳು ಸೇನೆಯ ಕುರಿತಾದ ಹಲವು ವಿಚಾರಗಳನ್ನು ಪ್ರಶ್ನಿಸುವುದರ ಮೂಲಕ ತಿಳಿದುಕೊಂಡರು. ಇದೇ ವೇದಿಕೆಯಲ್ಲಿ ಇವರನ್ನು ಶಾಲೆಯ ಪರವಾಗಿ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ಆರ್. ಪೂಜಾರಿ, ಉಪಾಧ್ಯಕ್ಷೆ ಅನುಪಮ ಶೆಟ್ಟಿ, ಸದಸ್ಯರಾದ ರಾಮಚಂದ್ರ ಶೇರೆಗಾರ್, ಉದಯ ದೇವಾಡಿಗ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಾಮಕೃಷ್ಣ ದೇವಾಡಿಗ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸತೀಶ ದೇವಾಡಿಗ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧ್ಯಕ್ಷೆ ಗೌರಿ ಮಹೇಶ್ ಕುಮಾರ್ ಮಂದಾರ್ತಿ, ಮಂಜುನಾಥ ಸಾೈಬ್ರಕಟ್ಟೆ, ಅಶೋಕ ಕೆರೆಕಟ್ಟೆ, ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಸೂರ್ಯ ದೇವಾಡಿಗ, ಮುಖ್ಯಶಿಕ್ಷಕಿ ಬಿ.ಎಸ್. ಜಯಂತಿ ಉಪಸ್ಥಿತರಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು, ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ನೆರೆದಿದ್ದು, ಸಿಹಿತಿಂಡಿ ವಿತರಣೆ ನಡೆಯಿತು. ಶಿಕ್ಷಕ ಉದಯ ಬಿ. ಕಾರ್ಯಕ್ರಮ ನಿರೂಪಿಸಿದರು. ಸುಮತಿ ಶೆಟ್ಟಿ ಸ್ವಾಗತಿಸಿ ಮುಖ್ಯ ಶಿಕ್ಷಕಿ ಪ್ರಾಸ್ತಾವಿಕ ಮಾತನಾಡಿದರು. ಅತಿಥಿ ಶಿಕ್ಷಕಿ ಚೈತ್ರಾ ವಂದನಾರ್ಪಣೆ ಗೈದರು. ಅತಿಥಿ ಶಿಕ್ಷಕಿ ನಿತಿಮಾ, ಗೌರವ ಶಿಕ್ಷಕಿ ಸುಜಾತಾ ಸಹಕರಿಸಿದರು.

 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ