ಸ್ವಚ್ಚ ಭಾರತ ಪ್ರೇಂಡ್ಸ್ ಮತ್ತು ಜೆ.ಸಿ.ಐ. ಉಡುಪಿ ಸಿಟಿಯಿಂದ ನೆರೆ ಪರಿಹಾರ ಸಾಮಗ್ರಿ ವಿತರಣೆ

ಕರಾವಳಿ ಕರ್ನಾಟಕ ವರದಿ/ ರಕ್ಷಿತ್ ವಂಡ್ಸೆ

ಉಡುಪಿ:
ಗದಗ ಜಿಲ್ಲೆಯ ನರಗುಂದ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಉಡುಪಿಯ ಸ್ವಚ್ಚ ಭಾರತ ಫ್ರೆಂಡ್ಸ್ ಮತ್ತು ಜೆ.ಸಿಐ. ಉಡುಪಿ ಸಿಟಿ  ತಂಡಗಳು ವಾಸನ ಶಾಲೆ ಮತ್ತು ಲಕ್ನೋಪುರ ಶಾಲೆಗೆ  ಶುಕ್ರವಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಹಾರ ಸಾಮಾಗ್ರಿಗಳನ್ನು ವಿತರಿಸಿದರು..

ಈ  ಭಾಗದ ಸುಮಾರು 369  ಕುಟುಂಬಗಳು ನೆರೆಯಿಂದ ತೀವ್ರ ಹಾನಿಗೊಳಗಾಗಿ ಮುಳುಗಡೆಗೊಂಡ  ಗದಗ ಜಿಲ್ಲೆಯ ನರಗುಂದ ತಾಲೂಕಿನ ವಾಸನ ಎಂಬ ಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಮ್ಮ ತಂಡ  ಪರಿಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಅದೇ ರೀತಿ ಲಕ್ನೋಪುರದ 200 ಕುಟುಂಬಗಳಿಗೆ ಪರಿಹಾರ ಸಾಮಗ್ರಿಗಳನ್ನು  ವಿತರಿಸಲಾಯಿತು.

ವಾಸನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಆವರಣದಲ್ಲಿ  ಮತ್ತು ಶಾಲೆಯ ಒಳಗಡೆ  ನೀರು ತುಂಬಿ ಶಾಲೆಯ ಮಕ್ಕಳು 1 ವಾರದ ತನಕ ರಜೆ ನೀಡಲಾಯಿತು.

ಲಕ್ನೋಪುರದಲ್ಲಿ  ರಸ್ತೆ ಮೇಲೆ ನೀರು ತುಂಬಿ ಇಲ್ಲಿಯ ಜನರು ಪ್ರಯಾಣಿಸಲು ಸಂಕಷ್ಟ ಪಡುತ್ತಿದ್ದಾರೆ,. ಇಲ್ಲಿನ ಅಕ್ಕಪಕ್ಕದ ಗ್ರಾಮಗಳಿಗೆ  ಹಾನಿ ಸಂಭವಿಸಿದೆ. ಈ ಮುಳುಗಡೆಯಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶ ವಾಸನ ಮತ್ತು ¯ಕ್ನೋಪುರ ಗಾಮವಾಗಿರುತ್ತದೆ.

ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಮೊತ್ತದ ಆಹಾರ  ಸಾಮಗ್ರಿ , ಬಟ್ಟೆ, ಬೆಡಶೀಟ್ , ಬಿಸ್ಕತ್ , ರಸ್ಕ್ , ಸೋಪ್ ಮತ್ತು ಇತ್ಯಾದಿ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು. .     

ಈ ಸಂದರ್ಭದಲ್ಲಿ   ರಕ್ಷಿತ್ ಕುಮಾರ ವಂಡ್ಸೆ , ಜೇಮ್ಸ್ ಉಡುಪಿ   ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯನಿ ಟಿ. ಬಿ. ಪಾಟೀಲ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ  ಎಚ್ .ವಿ. ಪಾಟೀಲ್ , ಎಸ್. ಈ. ಹಿರೇಮಟ್, ಸಂಜೀವ , ಹನುಮಂತ ಗೌಡ ಪಾಟೀಲ್, ಶ್ರೀಕಾಂತ ಸಕ್ರಸಾಲಿ , ವಿದ್ಯಾ ಮತ್ತು ತುಳಸಿಗೇರಿ ಸಕ್ರಮನವರ್ , ಎ.ಐ.ಎಫ್.ಟಿ. ಕಾರ್ಯಕ್ರಮ ಕೋಆರ್ಡಿನೇಟರ್ ಸಿಬ್ಬಂದಿಯವರಾದ ಸುಧಾಕರ ಭಂಡಾರಿ , ಕುಮಾರಿ ದರ್ಶೀನಿ,  ನಾಗರಾಜ .ಕೆ , ಪರಶುರಾಮ ಭಿಸನಕೊಪ್ಪ , ಪ್ರವೀಣ ಕುಡಾಬಾರು, ಸವಿತಾ ಸರಟೂರು , ಸುವರ್ಣಾ , ಸೋಮಣ್ಣ ಮತ್ತು. ಸಾರ್ವಜನಿಕರು ಉಪಸ್ಥಿತರಿದ್ದರು.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ