ಜಿಲ್ಲಾ ಪದವಿಪೂರ್ವ ವಾಣಿಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷರಾಗಿ ಸಂಜೀವ ಗುಂಡ್ಮಿ

ಕರಾವಳಿ ಕರ್ನಾಟಕ ವರದಿ

ಕೋಟ: ಜಿಲ್ಲಾ ಪದವಿಪೂರ್ವ ವಾಣಿಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷರಾಗಿ ಸಂಜೀವ ಗುಂಡ್ಮಿ ವಿವೇಕ ಪ.ಪೂ.ಕಾಲೇಜು, ಕೋಟ ಇವರು ಆಯ್ಕೆಯಾಗಿರುತ್ತಾರೆ.

ಇತರ ಪದಾಧಿಕಾರಿಗಳ ವಿವರ
ಕಾರ್ಯದರ್ಶಿ :  ನಾರಾಯಣ ಪೈ, ಶಾರದಾ ಪ.ಪೂ.ಕಾಲೇಜು, ಬಸ್ರೂರು,
ಖಜಾಂಚಿ : ಹರೀಶ್ ಕುಮಾರ್, ಎಸ್.ಎಮ್.ಎಸ್. ಪ.ಪೂ.ಕಾಲೇಜು, ಬ್ರಹ್ಮಾವರ,
ಉಪಾಧ್ಯಕ್ಷರು : ಸಂತೋಷ್ ಕುಮಾರ್, ಪೂರ್ಣಪ್ರಜ್ಞಾ ಪ.ಪೂ.ಕಾಲೇಜು, ಉಡುಪಿ
ಗೌರವ ಸಲಹೆಗಾರರಾಗಿ :
 ಐರಿನ್ ಮೆಂಡೋನ್ಸಾ, ಸೈಂಟ್ ಮೇರಿಸ್ ಪ.ಪೂ.ಕಾಲೇಜು, ಶಿರ್ವ
ವಿಜಯಲಕ್ಷ್ಮಿ, ಸರಕಾರಿ ಪ.ಪೂ.ಕಾಲೇಜು, ಪಲಿಮಾರು
ರಾಘವೇಂದ್ರ ಭಟ್, ಎಸ್.ವಿ. ಪ.ಪೂ.ಕಾಲೇಜು, ಗಂಗೊಳ್ಳಿ
ರಘುರಾಮ ನಾಯಕ್, ಸರಕಾರಿ ಪ.ಪೂ.ಕಾಲೇಜು, ಮುದರಂಗಡಿ
ಚಂದ್ರಶೇಖರ, ಸರಕಾರಿ ಪ.ಪೂ.ಕಾಲೇಜು, ನಾವುಂದ
ಇವರು ಆಯ್ಕೆಯಾಗಿರುತ್ತಾರೆ.

ಜಿಲ್ಲಾ ಪ.ಪೂ.ವಾಣಿಜ್ಯಶಾಸ್ತ್ರ ಉಪನ್ಯಾಸಕರ ಪುನಶ್ಚೇತರ ಕಾರ್ಯಾಗಾರ
ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜುಗಳ ವಾಣಿಜ್ಯಶಾಸ್ತ್ರ ಉಪನ್ಯಾಸಕರ ಪುನಶ್ಚೇತನ ಕಾರ್ಯಾಗಾರವು ದಿನಾಂಕ 22-08-2019ರ ಗುರುವಾರದಂದು ವಿವೇಕ ಪ.ಪೂ.ಕಾಲೇಜು, ಕೋಟ ಇವರ ಆತಿಥ್ಯದಲ್ಲಿ ಜರುಗಲಿರುವುದು ಎಂದು ತಿಳಿಸಲಾಗಿದೆ. ಅಂದು ಕಾರ್ಯಾಗಾರದಲ್ಲಿ ಭಾಗವಹಿಸುವ ಎಲ್ಲಾ ಉಪನ್ಯಾಸಕರಿಗೆ ಅನ್ಯಕಾರ್ಯನಿಮಿತ್ತ ಸೌಲಭ್ಯವಿರುವುದು.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ