ನನಗೆ 3 ಬಾರಿ ಸಿಎಂ ಆಗುವ ಅವಕಾಶ ತಪ್ಪಿ ಹೋಯ್ತು: ನೋವು ತೋಡಿಕೊಂಡ ಜಿ.ಪರಮೇಶ್ವರ್

ಕರಾವಳಿ ಕರ್ನಾಟಕ ವರದಿ

ತುಮಕೂರು:
ರಾಜ್ಯದ ಜನರ ಸೇವೆ ಮಾಡಲು ನನಗೆ ಮೂರು ಸಲ ಮುಖ್ಯಮಂತ್ರಿ ಆಗುವ ಅವಕಾಶವಿತ್ತು. ಆದರೆ ರಾಜಕೀಯ ಪ್ರಹಸನದ ನಡುವೆ ನನಗೆ ಅಂತಹ ಅವಕಾಶ ಕೈತಪ್ಪಿ ಹೋಯಿತು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.

ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲಿ ನಡೆದ ಹಿಂದೂ ಸಾದರ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ವಿಭಿನ್ನ ರೀತಿಯ ರಾಜಕೀಯ ನಡೆಗಳಿಂದಾಗಿ ಮೂರೂ ಬಾರಿಯೂ ಅವಕಾಶಗಳು ಕೈಜಾರಿ ಹೋದವು ಎಂದು ಬೇಸರದಿಂದ ನುಡಿದರು.

ರಾಜ್ಯದ ಸರಕಾರಿ ಇಲಾಖೆಯ ಅಧಿಕಾರಿಗಳಿಗೆ ಉನ್ನತ ಸ್ಥಾನ ನೀಡಲು ಜಾತಿಯ ಲೆಕ್ಕಾಚಾರವೇ ಮುಖ್ಯಪಾತ್ರ ವಹಿಸುತ್ತದೆ. ಆಡಳಿತ ನಡೆಸುವ ರಾಜಕಾರಣಿಗಳ ಸಮುದಾಯಕ್ಕೆ ಮುಖ್ಯಸ್ಥಾನ ಕೊಡುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಸರಕಾರ ನಡೆಸುವ ರಾಜಕಾರಣಿಗಳ ಮನಸ್ಸು ಬದಲಾವಣೆ ಆದಾಗ ಮಾತ್ರ ಜಾತಿಯ ವ್ಯವಸ್ಥೆ ಬದಲಾಗಲು ಸಾಧ್ಯ ಎಂದು ಹೇಳಿದ ಜಿ.ಪರಮೇಶ್ವರ್ ಜಾತಿ ವ್ಯವಸ್ಥೆಯ ಕರಾಳತೆಯ ಕುರಿತು ಕಳವಳ ವ್ಯಕ್ತಪಡಿಸಿದರು.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ