ಯುವತಿಯರ ಬೆತ್ತಲೆ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವಂಚಕ ಸೆರೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಯುವತಿಯ ಹೆಸರು ಹಾಗೂ ಭಾವಚಿತ್ರ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ತೆರೆದು ಯುವತಿಯರ ಜೊತೆ ಸ್ನೇಹ ಬೆಳೆಸಿಕೊಂಡು ಅವರ ಖಾಸಗಿ ಕ್ಷಣದ ಫೋಟೋಗಳನ್ನು ಪಡೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವಂಚಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

21 ವರ್ಷದ ಚಂದನ್ ಬಂಧಿತ ಆರೋಪಿ. ಬಿಕಾಂ ವ್ಯಾಸಂಗ ಮಾಡುತ್ತಿದ್ದ ಈತ ಯವತಿಯ ಹೆಸರಿನಲ್ಲಿ ನಕಲಿ ಇನ್ ಸ್ಟಾ-ಗ್ರಾಂ ಖಾತೆ ತೆಗೆದು, ಸುಂದರ ಯುವತಿಯರನ್ನು ಪರಿಚಯಮಾಡಿಕೊಳ್ಳುತ್ತಿದ್ದ. ನಂತರ ಅವರೊಂದಿಗೆ ಸಲುಗೆಯಿಂದ ಸ್ನೇಹ ಬೆಳೆಸಿ, ಅವರ ಖಾಸಗಿ ಕ್ಷಣಗಳ ಭಾವಚಿತ್ರ ಪಡೆದು ಹಣ ನೀಡುವಂತೆ ಬ್ಯ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ಯುವತಿಯೋರ್ವಳು, ತನಗೆ 15 ಸಾವಿರ ರೂ. ನೀಡುವಂತೆ ಆತ ಬೇಡಿಕೆ ಇಟ್ಟಿದ್ದು, 500 ರೂ. ಆತನ ಖಾತೆಗೆ ವರ್ಗಾವಣೆ ಮಾಡಿರುವುದಾಗಿ ದೂರು ನೀಡಿದ್ದರು. ಅದರನ್ವಯ ತನಿಖೆ ಕೈಗೊಳ್ಳಲಾಗಿತ್ತು. ಹಣ ಸಂಪಾದನೆ ಮಾಡುವ ದುರಾಸೆಯಿಂದ ಆತ ಈ ಮಾರ್ಗ ಅನುಸರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ತಾಣ ಬಳಕೆದಾರರು ಯಾವುದೇ ಕಾರಣಕ್ಕೆ ಕ್ಷಣಿಕ ಪ್ರಚೋದನೆ, ಆಮಿಷಗಳಿಗೆ ಒಳಗಾಗಿ ಖಾಸಗಿ ಕ್ಷಣಗಳ ಚಿತ್ರವನ್ನು ಇತರರೊಡನೆ ಹಂಚಿಕೊಳ್ಲಬಾರದೆಂದು ಪೋಲೀಸ್ ಆಧಿಕಾರಿಗಳು ಮನವಿ ಮಾಡಿದ್ದಾರೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ