ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ; 22 ಸಾವು

ಕರಾವಳಿ ಕರ್ನಾಟಕ ವರದಿ

ಶಿಮ್ಲಾ:
ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕನಿಷ್ಠ 22 ಮಂದಿ ಸಾವಿಗೀಡಾಗಿದ್ದಾರೆ, ರಾಜಧಾನಿ ದೆಹಲಿಗೂ ಪ್ರವಾಹ ಭೀತಿ ಆವರಿಸಿದೆ.

ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಅಲ್ಲಿ ಕನಿಷ್ಠ 22 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ ಮಳೆ ಸಂಬಂಧ ನಡೆದ ವಿವಿಧ ದುರಂತಗಳಲ್ಲಿ ಇಬ್ಬರು ನೇಪಾಳಿಗರು ಕೂಡ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಮ್ಲಾವೊಂದರಲ್ಲೇ 9 ಮಂದಿ ಸಾವಿಗೀಡಾಗಿದ್ದು, ಸೋಲಾನ್ ವ್ಯಾಲಿಯಲ್ಲಿ 5, ಕುಲ್ಲು. ಚಂಬಾ ಮತ್ತು ಸಿರ್ಮೌರ್ ನಲ್ಲಿ ತಲಾ ಇಬ್ಬರು, ಉನಾ, ಲಹೌಲ್ ಸ್ಪಿಟಿ ಜಿ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಶಿಮ್ಲಾದ ಆರ್‌ಟಿಒ ಕಚೇರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೂವರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರಾಖಂಡದಲ್ಲಿ ನಿನ್ನೆ ಸಂಭವಿಸಿದ್ದ ಮೇಘಸ್ಫೋಟದ ಪರಿಣಾಮ ಸುರಿದ ಭಾರಿ ಮಳೆ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ದೆಹಲಿ, ಹರ್ಯಾಣ, ಪಂಜಾಬ್ ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮೇಘಸ್ಫೋಟ ಪರಿಣಾಮ ಯಮುನಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇಲ್ಲಿನ ಅಣೆಕಟ್ಟುಗಳಿಂದ ಭಾರಿ ಪ್ರಮಾಣದ ನೀರನ್ನು ಹರಿಸುತ್ತಿರುವುದರಿಂದ ಹರ್ಯಾಣ, ಪಂಜಾಬ್ ಮತ್ತು ದೆಹಲಿಗೂ ಪ್ರವಾಹ ಭೀತಿ ಆವರಿಸಿದೆ.

ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ ಯಮುನಾ ನದಿ 203.37 ಅಡಿ ಎತ್ತರದಲ್ಲಿ ಹರಿಯುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ನದಿ ನೀರಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ಹಥಿನಿ ಕುಂಡ್ ಬ್ಯಾರೇಜ್ ನಿಂದ ನದಿಗ ಭಾನುವಾರ 8.14 ಕ್ಯೂಸೆಕ್ಸ್ ನೀರನ್ನು ಬಿಡಲಾಗಿದ್ದು, ಇದೂ ಕೂಡ ಪ್ರವಾಹದ ಭೀಕರತೆ ಹೆಚ್ಚಲು ಕಾರಣ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ