ಹುಚ್ಚು ಪ್ರೇಮಿಯ ರೌದ್ರಾವತಾರ. ಬೆಚ್ಚಿಬಿದ್ದ ಮಂಗಳೂರು: ಪ್ರೇಯಸಿಗೆ 14 ಬಾರಿ ಇರಿದು ತಾನೂ ಕತ್ತು ಕೊಯ್ದುಕೊಂಡ!

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಪ್ರೀತಿಸುತ್ತಿದ್ದ ಹುಡುಗಿ ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಎಂದು ರೊಚ್ಚಿಗೆದ್ದ ಹುಚ್ಚು ಪ್ರೇಮಿಯೊಬ್ಬ ಪ್ರೀತಿಸುತ್ತಿದ್ದ ಯುವತಿಗೆ ಚಾಕುವಿನಿಂದ ಮನಬಂದಂತೆ ಇರಿದು ತಾನೂ ಕತ್ತುಕೊಯ್ದುಕೊಂಡ ಭಯಾನಕ ಘಟನೆ ಮಂಗಳೂರಿನಲ್ಲಿ ನಡೆದಿದೆ. ಘಟನೆಯ ವಿಡಿಯೊ ವೈರಲ್ ಆಗಿದ್ದು ಕರಾವಳಿಯ ಜನತೆ ಬೆಚ್ಚಿಬಿದ್ದಿದ್ದಾರೆ.

ಶಕ್ತಿನಗರದ ನಿವಾಸಿ ಸುಶಾಂತ್ ಪ್ರೇಯಸಿಗೆ ಚಾಕು ಇರಿದು, ತಾನು ಕತ್ತು ಕೊಯ್ದುಕೊಂಡ ಭಗ್ನ ಪ್ರೇಮಿ. ಸುಶಾಂತ್ ಹೈಸ್ಕೂಲ್‍ನಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಮಾಡಿಕೊಂಡಿದ್ದನು. ಬಗಲಂಬಿ ನಿವಾಸಿ ಯುವತಿಯೊಬ್ಬಳು ಹೈಸ್ಕೂಲ್ ಓದುವಾಗ ಪರಿಚಯವಾಗಿತ್ತು. ನಂತರ ಆಕೆ ಕಾಲೇಜು ಮೆಟ್ಟಿಲೇರಿದಾಗ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮೂರು ವರ್ಷ ಪರಸ್ಪರ ಪ್ರೀತಿಸಿ ಸುತ್ತಾಡಿದ್ದರು. ಆದರೆ ಎಂಬಿಎಗೆ ಬಂದ ಮೇಲೆ ಯುವತಿ ಸುಶಾಂತ್ ಪ್ರೀತಿಯನ್ನು ತಿರಸ್ಕರಿಸಿ ದೂರ ತಳ್ಳಿದ್ದಳು. ಇದರಿಂದ ಸಿಟ್ಟಿಗೆದ್ದ ಸುಶಾಂತ್ ಯುವತಿಯನ್ನು ಅಡ್ದಗಡ್ಡಿ ಕೊಲೆಗೆ ಯತ್ನಿಸಿದ್ದಾನೆ.

ಈ ಭಯಾನಕ ಘಟನೆ ಜನರ ಎದುರಿಗೆ ನಡೆದಿದ್ದು ಎಲ್ಲರೂ ನೋಡುತ್ತಿದ್ದಂತೆಯೇ ಯುವತಿಗೆ ಪದೇ ಪದೇ ಚಾಕುವಿನಿಂದ ಇರಿದಿದ್ದಾನೆ. ಬಳಿಕ ತಾನೂ ಕುತ್ತಿಗೆ, ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದುಕೊಂಡಿದ್ದಾನೆ. ಈ ಘಟನೆ ವಿಡಿಯೊದಲ್ಲಿ ಸೆರೆಯಾಗಿದ್ದು ಕರಾವಳಿಯಾದ್ಯಂತ ಈ ಭಯಾನಕ ದೃಶ್ಯ ವೈರಲ್ ಆಗಿದೆ.

ಘಟನೆಯ ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದು ಯುವತಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ