ಜ್ಯೋತಿಷಿ ಮಾತು ಕೇಳಿ 45 ದಿನದ ಕಂದನನ್ನು ಕೊಂದ ಕಟುಕ ತಂದೆ!

ಕರಾವಳಿ ಕರ್ನಾಟಕ ವರದಿ

ಚಿಕ್ಕಮಗಳೂರು:
ಈ ಹೆಣ್ಣು ಮಗು ನಿನ್ನ ಭವಿಷ್ಯಕ್ಕೆ ಕಂಟಕವಾಗುತ್ತೆ ಎಂದು ಹೇಳಿದ ಜ್ಯೋತಿಷಿಯ ಮಾತು ಕೇಳಿ ಕಟುಕ ತಂದೆ 45 ದಿನದ ತನ್ನ ಕಂದಮ್ಮನ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಬೂಚೇನಹಳ್ಳಿ ಕಾವಲ್ ನಲ್ಲಿ 27 ವರ್ಷದ ಮಂಜುನಾಥ್ ಎಂಬಾತ ನವಜಾತ ಹೆಣ್ಣು ಶಿಶುವನ್ನು ಹತ್ಯೆ ಮಾಡಿದ್ದಾನೆ. ಜ್ಯೋತಿಷಿ ಈ ಹೆಣ್ಣು ಮಗು ನಿನ್ನ ಭವಿಷ್ಯಕ್ಕೆ ಕಂಟಕ ಎಂದು ಹೇಳಿದ್ದರಿಂದ ಈ ಮಾತನ್ನು ನಂಬಿ ಆತ ತನ್ನ ಮಗುವಿನ ಕತ್ತು ಹಿಸುಕಿ ಸಾಯಿಸಿದ್ದಾನೆ.

ಮಗುವನ್ನು ಕೊಂದ ಆರೋಪದ ಮೇಲೆ ಸದ್ಯ ಕಟುಕ ತಂದೆಯನ್ನು ಪೊಲೀಸರು ಬಂಧಿಸಿದ್ದು ಮಗುವಿನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ ಮಗುವಿನ ಸಾವಿಗೆ ಕಾರಣನಾದ ಜ್ಯೋತಿಷಿ ಸದ್ಯ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

*ಸಾಂದರ್ಭಿಕ ಚಿತ್ರ

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ