ಕೆ‌ಎಸ್‌ಆರ್‌ಟಿಸಿ ಬಸ್-ಬೈಕ್ ಢಿಕ್ಕಿ: ಕಾಲೇಜು ವಿದ್ಯಾರ್ಥಿ ಮೃತ್ಯು

ಕರಾವಳಿ ಕರ್ನಾಟಕ ವರದಿ

ಪುತ್ತೂರು
: ಕೆ‌ಎಸ್‌ಆರ್‌ಟಿಸಿ ಬಸ್ ಒಂದು ಬೈಕ್‌ಗೆ ಢಿಕ್ಕಿಯಾದ ಪರಿಣಾಮ ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಪುತ್ತೂರಿನಿಂದ್ ವರದಿಯಾಗಿದೆ. ತಾಲೂಕಿನ ಕಡಬ ಸಮೀಪದ ಬಲ್ಯ ಎಂಬಲ್ಲಿ ಈ ಅಪಘಾತ ಸಂಭವಿಸಿದೆ.

ಮೃತ ವಿದ್ಯಾರ್ಥಿಯನ್ನು ಮದ್ರಾಡಿ ನಿವಾಸಿ ಮೋಕ್ಷಿತ್ (21) ಎಂದು ಗುರುತಿಸಲಾಗಿದ್ದು ಸುಬ್ರಹಣ್ಯದ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಮೋಕ್ಷಿತ್ ಕಡಬದಿಂದ ಬಲ್ಯ ಕಡೆಗೆ ತೆರಳುತ್ತಿದ್ದಾಗ ಕೆ‌ಎಸ್‌ಆರ್‌ಟಿಸಿ ಬಸ್ ಆತನ ಬೈಕ್‌ಗೆ ಢಿಕ್ಕಿಯಾಗಿದೆ.

ಇದನ್ನೂ ಓದಿ:
ಮಂಗಳೂರು: ಓವರ್‌ಟೇಕ್ ಮಾಡುತ್ತಿದ್ದ ಬಸ್‌ ಬೈಕ್‌ಗೆ ಢಿಕ್ಕಿ. ಯುವಕ ದಾರುಣ ಸಾವು: http://bit.ly/2WEhs3q

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ