ಮಂಗಳೂರು: ಓವರ್‌ಟೇಕ್ ಮಾಡುತ್ತಿದ್ದ ಬಸ್‌ ಬೈಕ್‌ಗೆ ಢಿಕ್ಕಿ. ಯುವಕ ದಾರುಣ ಸಾವು

ಕರಾವಳಿ ಕರ್ನಾಟಕಾ ವರದಿ

ಮಂಗಳೂರು:
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ತಿಬ್ಲಪದವು ಎಂಬಲ್ಲಿ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

ಮೃತ ಯುವಕನನ್ನು ದೇವಿನಗರ ಕಂಬಳಪದವು ನಿವಾಸಿ ಹರ್ಷಿತ್ ಶೆಟ್ಟಿ (20) ಎಂದು ಗುರುತಿಸಲಾಗಿದೆ.

ಖಾಸಗಿ ಬಸ್ ಒಂದು ಇನ್ನೊಂದು ವಾಹನವನ್ನು ಓವರ್ಟೇಕ್ ಮಾಡುವಾಗ ಎದುರಿನಿಂದ ಬರುತ್ತಿದ್ದ ಹರ್ಷಿತ್ ಅವರು ಸವಾರಿ ಮಾಡುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಹರ್ಷಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹರ್ಷಿತ್ ಶೆಟ್ಟಿ, ಪಜೀರು ಗ್ರಾಮ ಪಂಚಾಯತ್ ಸದಸ್ಯೆ ಸುಜಾತಾ ಶೆಟ್ಟಿ ಅವರ ಅವಳಿ ಮಕ್ಕಳಲ್ಲಿ ಒಬ್ಬರಾಗಿದ್ದಾರೆ.  

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ