ಎಚ್1ಎನ್1. ಚಿಕಿತ್ಸೆ ಫಲಿಸದೆ ಉಡುಪಿಯ ಯುವ ಪತ್ರಕರ್ತೆ ಸಾವು. ವೈದ್ಯರ ನಿರ್ಲಕ್ಷ್ಯ ಆರೋಪ

ಕರಾವಳಿ ಕರ್ನಾಟಕ ವರದಿ

ಉಡುಪಿ
: ಎಚ್1ಎನ್1 ಸೋಂಕಿನಿಂದ ಯುವ ಪತ್ರಕರ್ತೆಯೋರ್ವರು ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ. ಪ್ರೈಮ್ ಟಿವಿಯಲ್ಲಿ ಸುದ್ದಿಸಂಪಾದಕಿಯಾಗಿ ಕೆಲ ಕಾಲ ಕೆಲಸ ಮಾಡಿ ಬಳಿಕ ಇತರ ಕೆಲವು ಮಾಧ್ಯಮ ಸಂಸ್ಥೆಗಳಲ್ಲಿ ದುಡಿಯುತ್ತಿದ್ದ ಅರ್ಚನಾ ಗುಂಡಿ ಮೃತ ಯುವತಿ.

ಕೆಲ ದಿನಗಳ ಹಿಂದೆ ಎಚ್1ಎನ್1 ಸೋಂಕಿನಿಂದ ಪೀಡಿತರಾಗಿದ್ದ ಅರ್ಚನಾ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯವಂತರಾಗಿಯೇ ಇದ್ದ ಅರ್ಚನಾಗೆ ಹಠಾತ್ ಆಗಿ ಎಚ್1ಎನ್1 ಕಾಣಿಸಿಕೊಂಡಿದ್ದು ಮಣಿಪಾಲ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮಾಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅರ್ಚನಾ ಮೃತಪಟ್ಟಿದ್ದಾರೆ.

ಮಣಿಪಾಲ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಅರ್ಚನಾ ಮೃತಪಟ್ಟಿದ್ದಾರೆ ಎಂದು ಅರ್ಚನಾ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಆಸ್ಪತ್ರೆಯ ಎದುರು ಅವರು ಪ್ರತಿಭಟನೆ ದಾಖಲಿಸಿದ್ದಾರೆ.

ನಾಲ್ಕು ತಿಂಗಳ ಹಿಂದಷ್ಟೆ ಅರ್ಚನಾ ಗಣೇಶ್ ಜೊತೆ ವಿವಾಹವಾಗಿದ್ದರು. ಮೃತಪಟ್ಟಾಗ ಆಕೆ ಗರ್ಭಿಣಿಯೂ ಆಗಿದ್ದರು.

ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗವೇಕಾಗಿದೆ.  

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ