ಪಾಣೆಮಂಗಳೂರಿನಲ್ಲಿ ಅಪಘಾತ: ಇಬ್ಬರು ಮಹಿಳೆಯರ ದಾರುಣ ಮೃತ್ಯು

ಕರಾವಳಿ ಕರ್ನಾಟಕ ವರದಿ

ಬಂಟ್ವಾಳ:
ಇಲ್ಲಿಗೆ ಸಮೀಪದ ಪಾಣೆಮಂಗಳೂರಿನಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಶಂಬೂರಿಗೆ ಗೃಹಪ್ರವೇಶಕ್ಕೆಂದು ಹೊರಟಿದ್ದವರ ಸೆಲೆರೊ ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್ ಪಾಣೆಮಂಗಳೂರಿನ ಹಳೆ ಟೋಲ್ ಗೇಟ್ ಬಳಿ ಮುಖಾಮುಖಿಯಾಗಿ ಢಿಕ್ಕಿಯಾಗಿವೆ. ಕಾರಿನಲ್ಲಿದ್ದ ಸರೋಜಿನಿ ಮತ್ತು ರುಕ್ಮಿಣಿ ಎಂಬಿಬ್ಬರು ಮಹಿಳೆಯರು ಸಾವನ್ನಪ್ಪಿದ್ದು ಕಾರು ಚಾಲಕ ಹಾಗೂ ಅನುಷಾ ಎಂಬ ಯುವತಿ ಗಾಯಗೊಂಡಿದ್ದಾರೆ.

ಸರೋಜಿನಿ ಮತ್ತು ರುಕ್ಮಿಣಿ ಮಂಗಳೂರಿನ ಜೆಪ್ಪು ನಿವಾಸಿಗಳಾಗಿದ್ದಾರೆ ಎನ್ನಲಾಗಿದೆ. ಬಂಟ್ವಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ