ಟಿಪ್ಪರ್ ಢಿಕಿ: ಬೈಕ್ ಸವಾರ ಯುವಕ ದಾರುಣ ಮೃತ್ಯು. ಇನ್ನೋರ್ವ ಗಂಭೀರ

ಕರಾವಳಿ ಕರ್ನಾಟಕ ವರದಿ

ಬಂಟ್ವಾಳ:
ಇರಾ ಸಮೀಪ ಮುಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಯುವಕ ಸಾವನ್ನಪ್ಪಿದ್ದು ಇನ್ನೋರ್ವ ಯುವಕ ಗಂಭೀರ ಗಾಯಗೊಂಡಿದ್ದಾರೆ. ಮೃತ ಯುವಕನನ್ನು ಮಂಚಿ ನಿವಾಸಿ ಸಿನಾನ್ (18) ಎಂದು ಗುರುತಿಸಲಾಗಿದೆ. ಜಹೀರ್ ಗಾಯಗೊಂಡ ಯುವಕ.

ತೊಕ್ಕೊಟ್ಟು ಕಡೆಯಿಂದ ಇರಾ ಕಡೆಗೆ ಹೋಗುತ್ತಿದ್ದಾಗ ಸಿನಾನ್ ಚಲಾಯಿಸುತ್ತಿದ್ದ ಬೈಕಿಗೆ ಟಿಪ್ಪರ್ ಲಾರಿ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಕೆಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ ಎನ್ನಲಾಗಿದೆ.

ಸಿನಾನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಹೀರ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ