ಉಗ್ರ ದಾಳಿ ಹಿನ್ನಲೆ: ಶ್ರೀಲಂಕಾದಲ್ಲಿ ಬುರ್ಖಾ ನಿಷೇಧಕ್ಕೆ ರಾಜಕೀಯ ಪಕ್ಷಗಳ ಆಗ್ರಹ!

ಕರಾವಳಿ ಕರ್ನಾಟಕ ವರದಿ

ಕೊಲೊಂಬೋ:
ಕಳೆದ ಭಾನುವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಮಹಿಳಾ ಬಾಂಬರ್‌ ಇರುವ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ದ್ವೀಪ ರಾಷ್ಟ್ರದ ಕೆಲ ಸಂಸದರು ಬುರ್ಖಾ ನಿಷೇಧಕ್ಕೆ ಸಲಹೆ ಮಾಡಿದ್ದಾರೆ.

ಯುಎನ್‌ಪಿ ಪಕ್ಷದ ನಾಯಕ ಆಶು ಮಾರಸಿಂಘೆ ಅವರು ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದು ಭದ್ರತಾ ದೃಷ್ಟಿಯಿಂದ ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ ಮುಖ್ಯ ಎಂದು್ ವಾದಿಸಿದ್ದಾರೆ.

'ಬುರ್ಖಾವನ್ನು ಉಗ್ರ ಕೃತ್ಯ ನಡೆಸುವ ಪುರುಷರು ತಮ್ಮ ಗುರುತು ಮುಚ್ಚಿಕೊಳ್ಳಲು ಬಳಕೆ ಮಾಡಿಕೊಂಡಿರುವ ಬಗ್ಗೆ ದೃಷ್ಟಾಂತ ಇದೆ. ದೇಶದ ಕೆಲವು ಭಾಗಗಳಿಗೆ ಮುಸ್ಲಿಂ ಸಮುದಾಯದ ಮಹಿಳೆಯರು ಪ್ರವೇಶಿಸುವಾಗ ಬುರ್ಖಾ ತೆಗೆಯಬೇಕು ಎಂಬ ಸೂಚನೆಯನ್ನು ನೀಡಲಾಗಿತ್ತು ಎಂದು ಅಂಶು ಮಾರಸಿಂಘೆ ಹೇಳಿದ್ದಾರೆ.

ಜತೆಗೆ ದ್ವೀಪ ರಾಷ್ಟ್ರದಲ್ಲಿರುವ ಸಮುದಾಯದ ಮುಖಂಡರು ಅದು ಸಾಂಪ್ರದಾಯಿಕ ವಸ್ತ್ರ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ದೇಶದಲ್ಲಿ ಬುರ್ಖಾ ನಿಷೇಧವನ್ನು ಜಾರಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬುರ್ಖಾ ಧರಿಸಿ ಪರಾರಿಯಾದ ಉಗ್ರರು?
ಕಳೆದ ಭಾನುವಾರ ನಡೆದ ಉಗ್ರದಾಳಿ ಪ್ರಕರಣದಲ್ಲಿ ಭಾಗಿಯಾದ ಶಂಕಿತರನ್ನು ವಿಚಾರಣೆಗೆ ಗುರಿಪಡಿಸಿದ ವೇಳೆ, ಬುರ್ಖಾ ಧರಿಸಿದ ಮಹಿಳೆಯರು ದಾಳಿಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಅಲ್ಲದೇ ಅನೇಕ ಉಗ್ರರು ಬುರ್ಖಾ ಧರಿಸಿ ಪರಾರಿಯಾಗಿದ್ದಾರೆ. ಹೀಗಾಗಿ ಮಸೀದಿಗಳ ಮೌಲ್ವಿಗಳ ಜೊತೆ ಚರ್ಚಿಸಿ ಬುರ್ಖಾ ನಿಷೇಧ ಜಾರಿಗೆ ತರುವ ನಿಟ್ಟಿನಿಂದ ಸಚಿವ ಸಂಪುಟದ ಸದಸ್ಯರು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ