ಕರಾವಳಿ ಕರ್ನಾಟಕ ವರದಿಬೆಳ್ತಂಗಡಿ: ವಿವಾಹಿತ ಮತ್ತು ಆತನ ಜೊತೆಗೆ ವಾಸಿಸುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಳ್ತಂಗಡಿಯಿಂದ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಯುವಕನನ್ನು ಕಿರಣ್ ಕುಮಾರ್ ಎಂದು ಗುರುತಿಸಲಾಗಿದೆ.
ಕಿರಣ್ ಕುಮಾರ್ ಈ ಹಿಂದೆ ಮದುವೆಯಾಗಿ ಹೆಂದತಿಗೆ ವಿಚ್ಛೇದನ ನೀಡಿದ್ದ ಎನ್ನಲಾಗಿದೆ. ಬಳಿಕ ಕಿರಣ್ ಬಣಕಲ್ ಸಮೀಪದ ಲವೀನಾ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಲವೀನಾ ಮತ್ತು ಕಿರಣ್ ಜೊತೆ ಲವೀನಾ ಅವರ ಸಂಬಂಧಿಯಾಗಿರುವ 16ರ ಹರಯದ ಹುಡುಗಿ ಕೂಡ ವಾಸವಿದ್ದರು. ಈ ಹುಡುಗಿಯ ಜೊತೆ ಕಿರಣ್ ಬೈಕ್ನಲ್ಲಿ ಸುತಾಡುತ್ತಿದ್ದು ಇದನ್ನು ಲವೀನಾ ಆಕ್ಷೇಪಿಸಿ ಗಂಡನೊಂದೊಗೆ ಜಗಳವಾಡಿದ್ದರು. ಈ ವೇಳೆ ಕಿರಣ್ ಲವೀನಾಳನ್ನು ಮನೆಯಿಂದ ಹೊರದಬ್ಬಿದ್ದಾನೆ.
ಏಪ್ರಿಲ್ 14 ರಂದು ಈ ಘಟನೆ ನಡೆದಿದ್ದು ಏಪ್ರಿಲ್ 15ರಂದು ಲವೀನಾ ಗಂಡನ ಮನೆಗೆಮರಳಿದ್ದಾರೆ. ಆ ವೇಳೆ ಮನೆಯಲ್ಲಿ ಕಿರಣ್ ಮತ್ತು ಲವೀನಾ ಸಂಬಂಧಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
5 ಗ್ರಾ.ಪಂ.ಗಳನ್ನು ಸೇರಿಸಿ ಗ್ರೇಟರ್ ಉಡುಪಿ!