ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ವರ್ಗಾವಣೆ: ನೂತನ ಡಿಸಿಯಾಗಿ ಪಿಸಿ ಜಾಫರ್

ಕರಾವಳಿ ಕರ್ನಾಟಕ ವರದಿ

ಮಂಡ್ಯ:
ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಎತ್ತಂಗಡಿ ಮಾಡಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಆದೇಶ ಹೊರಡಿಸಿದ್ದು, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮಂಜುಶ್ರೀ ಅವರನ್ನು ವರ್ಗಾವಣೆ ಮಾಡಲಾಗಿದೆ.

ಮಂಜುಶ್ರೀ ಸ್ಥಾನಕ್ಕೆ ಪಿ.ಸಿ.ಜಾಫರ್ ಅವರನ್ನು ನೇಮಕಗೊಳಿಸಿ ಡಿಪಿಎಎಆರ್ ಆದೇಶ ಹೊರಡಿಸಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಮಂಜುಶ್ರೀಗೆ ಯಾವುದೇ ಹುದ್ದೆ ಅಥವಾ ಸ್ಥಳವನ್ನು ತೋರಿಸಿಲ್ಲ.
ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ನಾಮಪತ್ರ ಸಲ್ಲಿಸುವಾಗ ಫಾರಂ ನಂ 28 ರನ್ನು ಭರ್ತಿ ಮಾಡಿರಲಿಲ್ಲ ಎಂದ ಆಕ್ಷೇಪವನ್ನು ಸುಮಲತಾ ಪರ ಏಜೆಂಟ್ ಮದನ್ ವ್ಯಕ್ತಪಡಿಸಿದ್ದರು. ಅಲ್ಲದ ನಾಮಪತ್ರ ಸಲ್ಲಿಕೆ ಹಾಗೂ ಪರಿಶೀಲನೆಯ ವಿಡಿಯೋ ದಾಖಲೆಗಳನ್ನು ನೀಡುವಂತೆ ಚುನಾವಣಾಧಿಕಾರಿ ದೂರು ನೀಡಿದ್ದರು. ದೂರಿಗೆ ಜಿಲ್ಲಾ ಚುನಾವಣಾಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ.ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆಂದು ಗಂಭೀರ ಆರೋಪವನ್ನು ಅಭ್ಯರ್ಥಿ ಸುಮಲತಾ ಹಾಗೂ ಏಜೆಂಟ್ ಮಾಡಿದ್ದರು.

ಮಂಡ್ಯ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಂಜುಶ್ರೀ ಮುಖ್ಯಮಂತ್ರಿ ಅವರ ಆಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದರು. ಅಲ್ಲದೆ ಸುಮಲತಾ ಪರ ಏಜೆಂಟ್ ಮದನ್ ಜಿಲ್ಲಾಧಿಕಾರಿ ಮುಖ್ಯಮಂತ್ರಿಗಳ ಆಣತಿಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ.ತಕ್ಷಣ ಅವರನ್ನು ಎತ್ತಂಗಡಿ ಮಾಡಿ ಎಂದು ಆಯೋಗಕ್ಕೆ ದೂರು ಸಲ್ಲಿಸಿದ್ದರು. ಸುಮಲತಾ ಅಂಬರೀಶ್ ಹಾಗು ಬಿಜೆಪಿ ನಾಯಕರು ಸಹ ಮುಖ್ಯ ಚುನಾವಣಾಧಿಕಾರಿಗೆ ಹಲವಾರು ದೂರು ನೀಡಿದ್ದರು.

ಚುನಾವಣಾ ಆಯೋಗ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಬಿಜೆಪಿ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿ ಅಧಿಕಾರ ದುರುಪಯೋಗದ ಬಗ್ಗೆ ದೂರು ನೀಡಿತ್ತು.ಈ ಬೆಳವಣಿಗೆಗಳ ಹಿನ್ನಲೆಯಲ್ಲಿ ಕೊನೆಗೂ ಜಿಲ್ಲಾಧಿಕಾರಿ ಎತ್ತಂಗಡಿ ಮಾಡಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ