ಆತ್ರಾಡಿಯಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಹಬ್ಬ

ರಕ್ಷಿತ್ ಕುಮಾರ ವಂಡ್ಸೆ/ಕರಾವಳಿ ಕರ್ನಾಟಕ ವರದಿ

ವಂಡ್ಸೆ:
ಕನ್ನಡಮ್ಮನ ಹರಕೆಯಿದು ಮರೆಯದಿರು ಚಿನ್ನ ಸಾಂಸ್ಕಂತಿಕ ವೇದಿಕೆ ಮತ್ತು ವಿಜಯ ಮಕ್ಕಳ ಕೂಟ ಶಾಲೆಯ ಆಶ್ರಯದಲ್ಲಿ ವಿದ್ಯಾರ್ಥಿಗಳ ಸಾಂಸ್ಕಂತಿಕ ಹಬ್ಬ ನಡೆಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎನ್. ಶೆಟ್ಟಿ ಬಗ್ವಾಡಿ  ಅಧ್ಯಕ್ಷರು ಗವರ್ನಿಂಗ್ ಕೌನ್ಸಿಲ್  ವಿ.ಎಂಕೆ ಇವರು ವಹಿಸಿದ್ದರು. ನಿವೃತ್ತ ವಿಜಯ ಬ್ಯಾಂಕ್ ಡಿ.ಜಿ.ಎಂ. ಆತ್ರಾಡಿ ನಾರಾಯಣ ಶೆಟ್ಟಿ  ದೀಪ ಬೆಳಗಿಸಿ ಉದ್ಘಾಟಿಸಿದರು. ಸೂರ್ಯ ಕುಂದಾಪುರ  ಜೀ ಕನ್ನಡ ವಾಹಿನಿಯ ಕಾಮಿಡಿ  ಕಿಲಾಡಿ ಖ್ಯಾತಿಯ ತೃತೀಯ ಬಹುಮಾನ ವಿಜೇತ ಕಲಾವಿದ “ಬಯಲಾಟ” ವಾರ್ಷಿಕ ಸಂಚಿಕೆ ಮುಖಪುಟ ಅನಾವರಣಗೊಳಿಸಿದರು.

ಬ್ರಹ್ಮಾವರ  ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು  ಶ್ರೀ ಓ.ಆರ್ ಪ್ರಕಾಶ, ಹಾಗೂ ವಿ.ಎಮ್.ಕೆ . ಯಕ್ಷಗುರು ಕರ್ನಾಟಕ ರಾಜ್ಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರು  ಪ್ರಸಾದ ಕುಮಾರ ಮೊಗೆಬೆಟ್ಟು ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಚಿತನಮಕ್ಕಿ ಸುಭಾಶ್ಚಂದ್ರ ಶೆಟ್ಟಿಯವರು ತಾಯಿ ದಿ. ರುಕ್ಮಿಣಿ ಶಿವರಾಮ ಶೆಟ್ಟಿಯವರ ಸವಿ ನೆನಪಿಗಾಗಿ  25 ಸಾವಿರ ರೂ. ಸಂಸ್ಥೆಗೆ ದತ್ತಿನಿಧಿ ಹಸ್ತಾಂತರಿಸಿದರು . ಆತ್ರಾಡಿ ಬಾಲಕೃಷ್ಣ ಶೆಟ್ಟಿ  ಸಿವಿಲ್ ಇಂಜಿನಿಯರ್, ಡಾ. ರಾಜೇಶ ಬಾಯರಿ ಪೋಷಕ ಸಂಘದ ಅಧ್ಯಕ್ಷರು ವಿ.ಎಂಕೆ ಆತ್ರಾಡಿ ಉಪಸ್ಥಿತರಿದ್ದರು.  ವಿಜಯ ಮಕಕಳ ಕೂಟ ಸಂಚಾಲಕ ಸುಭಾಶ್ಚಂದ್ರ ಶೆಟ್ಟಿ  ಪ್ರಾಸ್ತವಿಕ ಮಾತುಗಳನ್ನು ಆಡಿದರು.ಮುಖ್ಯ ಶಿಕ್ಷಕಿ ದೀಪಿಕಾ ಸುಭಾಸ್ ಸ್ವಾಗತಿಸಿದರು. ಕುಮಾರಿ ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.  ವಿದ್ಯಾರ್ಥಿಗಳಿಂದ ಪ್ರಸಾದ ಕುಮಾರ ಮೊಗೆಬೆಟ್ಟುರವರ ನಿರ್ದೇಶನದ ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶಿಸಲಾಯಿತು. ಅಲ್ಲದೇ ವಿವಿಧ ಸಾಂಸ್ಕಂತಿಕ ವಿನೋದಾವಳಿ ನಡೆಸಲಾಯಿತು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ