ಪಕ್ಷ ವಿರೋಧಿ ಹೇಳಿಕೆಗೆ ಪ್ರಮೋದ್‌ಗೆ ಎಚ್ಚರಿಕೆಯನ್ನೂ ಏಕೆ ನೀಡಿಲ್ಲ? ಅಮಾನತು ಆದೇಶಕ್ಕೆ ಅಮೃತ್ ಶೆಣೈ ಪ್ರತಿಕ್ರಿಯೆ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತನಾಗಿ ಇಷ್ಟು ವರ್ಷಗಳ ಕಾಲ ದುಡಿದಿದ್ದೇನೆ. ಪಕ್ಷಕ್ಕೆ ಮುಜುಗರವಾಗುವಂತೆ ನಾನು ಎಂದಿಗೂ ವರ್ತಿಸಿಲ್ಲ. ಈಗ ನಾನು ಮಾಡುತ್ತಿರುವುದು ತಾಂತ್ರಿಕವಾಗಿ ತಪ್ಪಾದರೂ ನೈತಿಕವಾಗಿ ಸರಿ ಇದೆ ಎಂಬ ವಿಶ್ವಾಸದಿಂದಲೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡ ಮಾಜಿ ಕೆಪಿಸಿಸಿ ಸದಸ್ಯ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಮೃತ್ ಶೆಣೈ ಹೇಳಿದ್ದಾರೆ.

ಪಕ್ಷದಲ್ಲಿ ದೊಡ್ಡ ನಾಯಕರಿಗೆ ಒಂದು ರೀತಿಯ ಕಾನೂನು ಉಳಿದವರಿಗೆ ಇನ್ನೊಂದು ಕಾನೂನು ಎಂಬ ವಾತಾವರಣವಿದೆ. ನನ್ನ ಅಮಾನತು ಆದೇಶ ನನ್ನ ಕೈಗೆ ಇನ್ನೂ ಸಿಕ್ಕಿಲ್ಲ. ಆದರೆ ನನ್ನನ್ನು ಅಮಾನತು ಮಾಡಿರುವ ಕಾಂಗ್ರೆಸ್ ಪಕ್ಷ ಪ್ರಮೋದ್ ಮಧ್ವರಾಜ್ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಿದಾಗ ಏಕೆ ಸುಮ್ಮನಿತ್ತು? 'ನಾನು ಬಿಜೆಪಿ ಬಾಗಿಲಲ್ಲಿ ನಿಂತಿದ್ದೇನೆ' ಎಂದು ಪ್ರಮೋದ್ ಮಧ್ವರಾಜ್ ಹೇಳಿದರು. ಸರ್ಕಾರವೇ ನಿರ್ಣಯ ಮಾಡಿ ಆಚರಿಸಿದ ಟಿಪ್ಪು ಜಯಂತಿಯಲ್ಲಿ ಭಾಗವ್ಹಿಸದ ಹಾಗೆ ದೇವರೇ ಮಾಡಿದ' ಎಂದು ಹೇಳಿಕೆ ನೀಡಿದರು. ಇದೆಲ್ಲ ಪಕ್ಷದ ಮೇಲೆ ಪರಿಣಾಮ ಬೀರುವ ಹೇಳಿಕೆಗಳಲ್ಲವೆ? ಯಾಕೆ ಕಾಂಗ್ರೆಸ್ ಹೈಕಮಾಂಡ್ ಪ್ರಮೋದ್ ಮಧ್ವರಾಜ್ ಅವರಿಗೆ ಎಚ್ಚರಿಕೆಯನ್ನೂ ಸಹ ಕೊಡಲಿಲ್ಲ ಎಂದು ಅಮೃತ್ ಶೆಣೈ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಕ್ಷದಲ್ಲಿ ಹೃದಯ ಮತ್ತು ಮನಸ್ಸು ಇಟ್ಟು ದುಡಿದಿದ್ದೇನೆ. ಕಾರಣವನ್ನೂ ಸಹ ಕೇಳದೆ ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿದ ಕ್ರಮಕ್ಕೆ ನನ್ನ ವಿರೋಧವಿದೆ. ಪ್ರಮೋದ್ ಮಧ್ವರಾಜ್ ಜೊತೆಗೆ ಎಲ್ಲ ಚುನಾವಣೆಯಲ್ಲೂ ಅವರ ಜೊತೆಗಿದ್ದು ದುಡಿದಿದ್ದೇನೆ. ಅವರ ಬಗ್ಗೆ ವೈಯಕ್ತಿಕವಾಗಿ ಪ್ರೀತಿ ಇದೆ. ಆದರೆ ಅವರ ತಪ್ಪು ರಾಜಕೀಯ ನಿರ್ಧಾರಗಳನ್ನು ಬೆಂಬಲಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಅಮೃತ್ ಶೆಣೈ ಪ್ರತಿಕ್ರಿಯಿಸಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ