ಜನರ ನಾಡಿಮಿಡಿತ ಅರಿತು ಸ್ಪರ್ಧಿಸುತ್ತಿದ್ದೇನೆ: ಅಮೃತ್ ಶೆಣೈ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಜಿಲ್ಲಾ ಕಾಂಗ್ರೆಸ್‌ನ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಂಗ್ರೆಸ್ ಪಕ್ಷ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಇದು ನನಗೆ ನೋವು ತಂದಿಎ. ತಳಮಟ್ಟದ ಕಾರ್ಯಕರ್ತರಾದ ನನ್ನಂಥವರಿಗೆ ಜನರ ನಾಡಿಮಿಡಿತದ ಅರಿವಿದೆ. ನನ್ನ ಸಮಾಜ ಸೇವೆಯನ್ನು ಬಲ್ಲವರು ನನಗೆ ಮತನೀಡಲಿದ್ದಾರೆ ಎಂಬ ಭರವಸೆ ಇದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಮೃತ್ ಶೆಣೈ ಹೇಳಿದ್ದಾರೆ. ತಮ್ಮ ಚುನಾವಣಾ ಕಛೇರಿಯಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟ ಕುರಿತು ಕಾಂಗ್ರೆಸ್ ನಲ್ಲಿ ವ್ಯಾಪಕ ಅಸಮಾಧಾನವಿದೆ. ನಾನೂ ಕೂಡ ಕಾಂಗ್ರೆಸ್ ವರಿಷ್ಟರನ್ನು ಸಂಪರ್ಕಿಸಿ ನನ್ನ ಅಸಮಾಧಾನವನ್ನು ತಿಳಿಸಿದ್ದೇನೆ. ಜೆದಿಎಸ್‌ಗೆ ಇಲ್ಲಿ ಅಭ್ಯ್ರಥಿಯೂ ಸಹ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅನ್ನು ಸಂಪರ್ಕಿಸಿ ಅವರಿಗೆ ಮನವರಿಕೆ ಮಾಡಿಕೊಡುವ ಬದಲು ಸ್ವತಃ ಪ್ರಮೋದ್ ಜೆಡಿಎಸ್ ಅನ್ನು ಸಂಪರ್ಕಿಸಿ ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಂಡರು.  ಪ್ರಮೋದ್ ಮಧ್ವರಾಜ್ಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯದ ಬಗ್ಗೆ ಯಾವ ಕಾಳಜಿಯೂ ಇಲ್ಲ ಎಂದು ಅಮೃತ್ ಶೆಣೈ ಹೇಳಿದರು.

ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದರೆ ಜನರ ಆಶೋತ್ತರಗಳನ್ನು ಈಡೇರಿಸಲು ಕೆಲಸ ಮಾಡುತ್ತೇನೆ. ಸಾಮಾಜಿಕ ಸಾಮಾರಸ್ಯ ಕಾಪಾಡಲು ಶ್ರಮಿಸುತ್ತೇನೆ ಎಂದು ಶೆಣೈ ಹೇಳಿದ್ದಾರೆ. ಬಿಜೆಪಿ ಹಿಂದೂತ್ವದ ರಾಜಕೀಯದ ಮೂಲಕ ಸಮಾಜವನ್ನು ಒಡೆಯುತ್ತಿದೆ. ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಇಷ್ಟೆಲ್ಲ ತಂತ್ರಜ್ಞಾನವಿದ್ದರೂ ಸುವರ್ಣ ತ್ರಿಭುಜ ಬೋಟ್ ಅನ್ನು ಪತ್ತೆ ಮಾಡಲು ಸರ್ಕಾರ ವಿಫಲವಾಗಿದೆ ಎಂದು ಅಮೃತ್ ಶೆಣೈ ದೂರಿದರು.

ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆಚರಿಸಿದಾಗ ಟಿಪ್ಪು ಜಯಂತಿಗಳಿಗೆ ಹಾಜರಾಗದ ಅಂದಿನ ಸಚಿವ ಪ್ರಮೋದ್ ಮಧ್ವರಾಜ್ ಬಳಿಕ ಟಿಪ್ಪು ಜಯಂತಿಗೆ ವಿರೋಧವಾಗಿ ಮಾತನಾಡಿದರು, ಇದು ಕಾಂಗ್ರೆಸ್ ಪಕ್ಷದ ಸಿಧಾಂತಕ್ಕೆ ವಿರೋಧವಲ್ಲವೆ ಎಂದು ಶೆಣೈ ಪ್ರಶ್ನಿಸಿದರು.

ನನ್ನ ವಿರುದ್ಧ ಜೆದಿಎಸ್ ಅಭ್ಯರ್ಥಿಯ ವಿರುದ್ಧವೇ ವಿನಃ ಕಾಂಗ್ರೆಸ್ ವಿರುದ್ಧ ಅಲ್ಲ. ಹೀಗಾಗಿ ಎಐಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಓಡುವ ಕುರಿತು ಸದ್ಯಕ್ಕೆ ಯೋಚಿಸಿಲ್ಲ. ಹಿತೈಷಿಗಳೊಡನೆ ಚರ್ಚಿಸಿ ಆ ಕುರಿತು ನಿರ್ಧರಿಸಲಿದ್ದೇನೆ. ಚುನಾವಣೆಯಲ್ಲಿ ಗೆಲ್ಲುವ ಭರವಸೆಯಿಂದಲೇ ಸ್ಪರ್ಧಿಸುತ್ತಿದ್ದೇನೆ ಎಂದು ಶೆಣೈ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ  ಮನೋವೈದ್ಯ ಡಾ. ಪಿ. ವಿ. ಭಂಡಾರಿ, ಜಯಶ್ರೀ ಭಟ್, ಅನ್ಸಾರ್ ಅಹ್ಮದ್, ಅನಿತಾ ಡಿಸೋಜ, ಶಾಹಿದ್ ಅಲಿ, ಆಮಿರ್ ಬೆಳಪು,ವರದರಾಜ್, ಕೃಷ್ಣಪ್ಪ ಉಪೂರು, ಅಹ್ಮದ್ ನೇಜಾರ್, ಕಿಶೋರ್ ಶೆಟ್ಟಿ, ರಫೀಕ್ ಕಲ್ಯಾಣಪುರ, ಯಜ್ಞೇಶ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ