ಮೋದಿ ಭಾವಚಿತ್ರದ ಸೀರೆ ಮಾರಾಟ: ಉದ್ಯಾವರ ಜಯಲಕ್ಷ್ಮಿ ಟೆಕ್ಸ್‌ಟೈಲ್ಸ್ ಮೇಲೆ ಆಯೋಗ ದಾಳಿ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಚುನಾವಣಾ ಆಯೋಗದ ಎಚ್ಚರಿಕೆಯ ಹೊರತಾಗಿಯೂ ನೀತಿ ಸಂಹಿತೆ ಉಲ್ಲಂಘಿಸಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿರುವ ಸೀರೆ ಮಾರುತ್ತಿದ್ದ ಉಡುಪಿಯ ಉದ್ಯಾವರದಲ್ಲಿರುವ ಜಯಲಕ್ಷ್ಮಿ ಟೆಕ್ಸ್‌ಟೈಲ್ಸ್ ಮೇಲೆ ಚುನಾವಣಾ ಆಯೋಗ ದಾಳಿ ನಡೆಸಿದೆ.

ಚುನಾವಣಾ ಆಯೋಗದ ಸಿಬ್ಬಂದಿ ದಾಳಿ ಸಂದರ್ಭದಲ್ಲಿ ನರೇಂದ್ರ ಮೋದಿ ಚಿತ್ರವಿರುವ ಎರಡು ಸೀರೆ ವಶಪಡಿಸಿಕೊಂಡಿದೆ. ಜಯಲಕ್ಷ್ಮಿ ಜವಳಿ ಅಂಗಡಿಯಲ್ಲಿ ಬಾಲಕೋಟ್ ಮತ್ತು ನರೇಂದ್ರ ಮೋದಿ ಭಾವಚಿತ್ರವಿರುವ ಸೀರೆ ಮಾರುತ್ತಿದ್ದರು ಎನ್ನಲಾಗಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯಲಕ್ಷ್ಮಿ ಟೆಕ್ಸ್‌ಟೈಲ್‌ನಲ್ಲಿ ಮೋದಿ ಭಾವಚಿತ್ರವಿರುವ ಸೀರೆ ಮಾರಾಟ ಕುರಿತು ಈ ಮೊದಲೇ ಆಯೋಗಕ್ಕೆ ಮಾಹಿತಿ ದೊರೆತಿತ್ತು. ಆಯೋಗ ಎಚ್ಚರಿಕೆ ಕೊಟ್ಟಿದ್ದರೂ ಮಾಲೀಕರು ಸೀರೆಗಳನ್ನು ಮಾರಾಟ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ  ದಾಳಿ ನಡೆಸಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ