ಜರ್ಮನಿಯಲ್ಲಿ ಬಸ್ರೂರು ದಂಪತಿಗೆ ಚೂರಿ ಇರಿತ: ಕುಟುಂಬದ ನೆರವಿಗೆ ಬಂದ ಜಯಪ್ರಕಾಶ್ ಹೆಗ್ಡೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಜರ್ಮನಿಯಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಮೃತಪಟ್ಟ ಬಸ್ರೂರಿನ ಪ್ರಶಾಂತ್ ಮತ್ತು ಗಾಯಗೊಂಡ ಪ್ರಶಾಂತ್ ಅವರ ಪತ್ನಿ ಸ್ಮಿತಾ ಅವರ ಕುಟುಂಬದ ನೆರವಿಗೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಧಾವಿಸಿದ್ದಾರೆ. ಹೆಗ್ಡೆ ಅವರ ಮಧ್ಯಪ್ರವೇಶದ ಕಾರಣ ಪ್ರಶಾಂತ್ ಮತ್ತು ಸ್ಮಿತಾ ಕುಟುಂಬಸ್ಥರು ಜರ್ಮನಿಗೆ ತೆರಳು ಅನುಕೂಲವಾಗಲಿದೆ. ಸೋಮವಾರ ಪ್ರಶಾಂತ್ ಮತ್ತು ಸ್ಮಿತಾ ಕುಟುಂಬಸ್ಥರು  ಜರ್ಮನಿಗೆ ತೆರಳಿದ್ದಾರೆ ಎಂದು ಮಾಹಿತಿಗಳು ಲಭ್ಯವಾಗಿದೆ.

ಮಾರ್ಚ್ 29 ರಂದು ಪ್ರಶಾಂತ್ ಮತ್ತು ಸ್ಮಿತಾ ಅವರ ಮೇಲೆ ಹಲ್ಲೆಯಾಗಿತ್ತು. ಪ್ರಶಾಂತ್ ಮೃತಪಟ್ಟು ಸ್ಮಿತಾ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಬಸ್ರೂರು ಮತ್ತು ಕುಂದಾಪುರದಲ್ಲಿದ್ದ ಕುಟುಂಬ ಸದಸ್ಯರು ಕೂಡಲೇ ಜರ್ಮನಿಗೆ ತೆರಳಲು ಬಯಸಿದ್ದರೂ ಸಹ ಪಾಸ್‌ಪೋರ್ಟ್ ಮುಂತಾದ ತಾಂತ್ರಿಕ ತೊಂದರೆಗಳ ಕಾರಣ ಅವರ ಪ್ರಯಾಣಕ್ಕೆ ಅಡಚಣೆ ಉಂಟಾಗಿತ್ತು. ಇದನ್ನು ಅರಿತ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಇಬ್ಬರ ಕುಟುಂಬ ಸದಸ್ಯರನ್ನು ಬೆಂಗಳೂರಿಗೆ ಬರುವಂತೆ ಕರೆ ಮಾಡಿದ್ದಾರೆ.

ಎರಡೂ ಕುಟುಂಬಗಳ ಸದಸ್ಯರು ಬೆಂಗಳೂರು ತಲುಪಿದ ಬಳಿಕ ಅವರೊಂದಿಗೆ ಪಾಸ್ಪೋರ್ಟ್ ಕಛೆರಿಗೆ ಜಯಪ್ರಕಾಶ ಹೆಗ್ಡೆ ಖುದ್ದು ತೆರಳಿ ತುರ್ತಾಗಿ ಪಾಸ್‌ಪೋರ್ಟ್ ವ್ಯವಸ್ಥೆ ಮಾಡುವಂತೆ ಕೇಳಿದ್ದಾರೆ. ವಿದೇಶಾಂಗ ಸಚಿವಾಲಯದ ಜೊತೆಗೂ ಸಂಪರ್ಕ ಸಾಧಿಸಿದ ಹೆಗ್ಡೆ ಅಲ್ಲಿಂದಲೂ ನೆರವಿಗಾಗಿ ಅಧಿಕಾರಿಯೊಬ್ಬರನ್ನು ನಿಯೋಜಿಸುವಂತೆ ನೋಡಿಕೊಂಡಿದ್ದಾರೆ.


                                         ಪ್ರಶಾಂತ್ ಮತ್ತು ಸ್ಮಿತಾ
ಪ್ರಶಾಂತ್ ತಾಯಿ ವಿನಯಾ, ಸ್ಮಿತಾ ಅವರ ತಂದೆ ತಾಯಿ ಹಾಗೂ ಕುಟುಂಬದ ಆತ್ಮೀಯರೊಬ್ಬರು ಸೋಮವಾರ ಜರ್ಮನಿಗೆ ತೆರಳಿದ್ದಾರೆ. ಹೆಗ್ಡೆ ಅವರ ಸಕಾಲಿಕ ಮಧ್ಯಪ್ರವೇಶದಿಂದ ಪ್ರಶಾಂತ್ ಮತ್ತು ಸ್ಮಿತಾ ಕುಟುಂಬಸ್ಥರು ಜರ್ಮನಿಗೆ ತೆರಳಲು ನೆರವಾಗಿದೆ.

ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಅವರ ಈ ನೆರವು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಉದುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹೆಗ್ಡೆ ಅವರನ್ನು ಆಯ್ಕೆ ಮಾಡಬೇಕೆಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಅಭಿಯಾನ ನಡೆದಿತ್ತು. ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ಅವರ ಕೈ ತಪ್ಪಿತ್ತು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ