ಮೊನ್ನೆ ಬಂಧಿಸಲಟ್ಟಿದ್ದ ಅತ್ಯಾಚಾರ ಆರೋಪಿ ನಿನ್ನೆ ಮಣಿಪಾಲ ಪೊಲೀಸರ ಬಂಧನದಿಂದ ಪರಾರಿ!

ಕರಾವಳಿ ಕರ್ನಾಟಕ ವರದಿ

ಉಡುಪಿ:
17 ವರ್ಷದ ಯುವತಿಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ ಪ್ರಕರಣದ ಆರೋಪಿ ಮಣಿಪಾಲ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆರೋಪಿ ಹನುಮಂತಪ್ಪನನ್ನು ಮಣಿಪಾಲ ಪೊಲೀಸರು ಮಾರ್ಚ್ 29 ರಂದು ಬಂಧಿಸಿದ್ದರು.

 ಮಾರ್ಚ್ 31 ಶನಿವಾರ ಹನುಮಂತಪ್ಪನನ್ನು ಮಣಿಪಾಲ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಾಸು ಕರೆತರುವಾಗ ಆತ ಪರಾರಿಯಾಗಿದ್ದಾನೆ. ನ್ಯಾಯಾಧೀಶರು ಹನುಮಂತಪ್ಪನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು.

ಮಾರ್ಚ್ 9 ರಂದು ಹನುಮಂತಪ್ಪ ಯುವತಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದ. ಆಕೆಯ ಗೆಳೆತನ ಬೆಳೆಸಿದ್ದ ಹನುಅಂತಪ್ಪ ಆಕೆಗೆ ಒಳ್ಳೆಯ ಕೆಲಸ ಕೊಡುವುದಾಗಿ ಪುಸಲಾಯಿಸಿದ್ದ.ಬಳಿಕ ಆಕೆಯನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ