ವಿಫಲವಾಯಿತೆ ರಾಜಕೀಯ ಪ್ರೇರಿತ ಐಟಿ ದಾಳಿ? Sorry ಕೇಳಿದರೆ ಅಧಿಕಾರಿಗಳು?

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಲೋಕಸಭಾ ಚುನಾವಣೆಯಲ್ಲಿ ಮೊದಲ ಹಂತದ ಮತದಾನ ನಡೆಯುವ 6 ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆದ ಐಟಿ ದಾಳಿ ಅಂತ್ಯವಾಗಿದ್ದು ದಾಳಿಯಲ್ಲಿ ದೊಡ್ಡ ಮೊತ್ತದ ಹಣ-ಚಿನ್ನ ಅಥವಾ ಇತರ ಸೊತ್ತುಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎನ್ನಲಾಗುತ್ತಿದೆ. ವಿಪಕ್ಷಗಳಿಂದ 'ರಾಜಕೀಯ ಪ್ರೇರಿತ' ಐಟಿ ದಾಳಿ ಎಂದು ಟೀಕೆಗೆ ಗುರಿಯಾಗಿರುವ ಈ ಐಟಿ ದಾಳಿ ವಿಫಲವಾಗಿದೆ ಎನ್ನುತ್ತಿವೆ ಮೂಲಗಳು.

ಹಾಸನ, ಮಂಡ್ಯ, ಶಿವಮೊಗ್ಗ, ಮೈಸೂರು, ಕನಕಪುರ, ಚಿಕ್ಕಮಗಳೂರಿನಲ್ಲಿ ನಡೆದ ಈ ದಾಳಿಯಲ್ಲಿ ರಾಜ್ಯದ ಸಚಿವರು ಹಾಗೂ ಅವರ ಆಪ್ತರ ಮನೆಗಳನ್ನು ಗುರಿ ಮಾಡಲಾಗಿತ್ತು. ಕೆಲವು ಗುತ್ತಿಗೆದಾರರ ಮನೆಗಳ ಮೇಲೂ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಸಚಿವ ರೇವಣ್ಣ ಆಪ್ತ ಗುತ್ತಿಗೆದಾರ ಶಿವಮೂರ್ತಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಅವರ ಮನೆಯಲ್ಲಿ ಸಿಕ್ಕ 50,000 ನಗದನ್ನು ವಾಪಸ್ ಕೊಟ್ಟು ಹೋಗಿದ್ದಾರೆ. ದಾಳಿ ನಡೆಸಿದ ಅಧಿಕಾರಿಗಳು ದಾಳಿ ನಡೆಸಿದ ಹಲವೆಡೆ ಏನೂ ಸಿಕ್ಕದಿರುವ ಕಾರಣ ದಾಳಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ