ಮಾತಲ್ಲಿ ಆಕ್ರೋಶ. ಮನದಲ್ಲಿ ಪ್ರೀತಿ? ಪ್ರಧಾನಿ ಮೋದಿಯಿಂದ ಪಾಕಿಸ್ತಾನಕ್ಕೆ ‘ಲವ್ ಲೆಟರ್’!

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನದ ನಡುವೆ ಗಡಿಯಲ್ಲಿ ತೀವ್ರ ಉದ್ವಿಗ್ನತೆ ಇರುವ ಸಂದರ್ಭದಲ್ಲೂ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ರಾಷ್ಟ್ರೀಯ ದಿನಕ್ಕೆ ಶುಭಾಶಯ ಕೋರಿ ‘ಲವ್ ಲೆಟರ್’ ಕಳುಹಿಸಿ ಅಚ್ಚರಿಮೂಡಿಸಿದ್ದಾರೆ. ಈ ಕುರಿತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

“ಪಾಕಿಸ್ತಾನದ ರಾಷ್ಟ್ರೀಯ ದಿನದಂದು ಪಾಕಿಸ್ತಾನದ ಜನತೆಗೆ ನಾನು ನನ್ನ ಶುಭಾಶಯಗಳನ್ನು ಕೋರುತ್ತಿದ್ದೇನೆ. ಉಪ-ಖಂಡದ ಜನತೆ ಈ ಪ್ರದೇಶವನ್ನು ಹಿಂಸೆ ಮತ್ತು ಭಯೋತ್ಪಾದನೆ ಮುಕ್ತ ಪ್ರಜಾತಾಂತ್ರಿಕ, ಶಾಂತಿಯುತ, ಪ್ರಗತಿಪರ ಮತ್ತು ಸಮೃದ್ಧ ಪ್ರದೇಶವಾಗಿಸಲು ಜೊತೆಯಾಗಿ ಶ್ರಮಿಸಬೇಕು” ಎಂದು ಮೋದಿ ಇಮ್ರಾನ್ ಖಾನ್‌ಗೆ ಶುಭ ಕೋರಿದ ಸಂದೇಶದಲ್ಲಿ ತಿಳಿಸಿದ್ದಾರೆ.

ಪುಲ್ವಾಮಾ ದಾಳಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಗಡಿಯಲ್ಲೂ ಪಾಕಿಸ್ತಾನದಿಂದ ಅಪ್ರಚೋದಿತ ದಾಳಿಗಳು ನಡೆಯುತ್ತಿದ್ದು ಸೈನಿಕರು ಹತರಾಗುತ್ತಿದ್ದಾರೆ. ಭಯೋತ್ಪಾಕದಕರೂ ಸಹ ಪಾಕ್ ನೆಲದಿಂದ ಮತ್ತೆ ಮತ್ತೆ ಸೈನಿಕರ ಮೇಲೆ ದಾಳಿ ನಡೆಸುತ್ತಿದ್ದು ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ರಾಷ್ಟ್ರೀಯ ದಿನದ ಶುಭಾಶಯ ಕಳುಹಿಸಿದ ಪ್ರಧಾನಿ ಮೋದಿ ಅವರ ನಡೆ ಟೀಕೆಗೆ ಗುರಿಯಾಗಿದೆ.

ಸರ್ಜಿಕಲ್ ಸ್ಟ್ರೈಕ್ ಬಳಿಕ ವಿಪಕ್ಷಗಳು ಸಾಕ್ಷ್ಯ ಕೇಳಿ ಸೇನೆಯನ್ನು ಪ್ರಶ್ನೆ ಮಾಡುವ ಮೂಲಕ ಸೇನೆಯ ಸ್ಥೈರ್ಯ ಕೆಡಿಸುತ್ತಿವೆ ಎಂದು ತಮ್ಮ ಚುನಾವಣಾ ಭಾಷಣಗಳಲ್ಲಿ ನಿತ್ಯವೆಂಬಂತೆ ಹೇಳುವ ನರೇಂದ್ರ ಮೋದಿ ಗಡಿಯಲ್ಲಿ ಭಾರತದ ಸೇನೆಯ ನೆತ್ತರು ಹರಿಯುತ್ತಿದ್ದರೂ ಪಾಕಿಸ್ತಾನಕ್ಕೆ ಶುಭಾಶಯ ಕೋರಿರುವುದು ಎಷ್ಟು ಸರಿ ಎಂದು ಟೀಕೆ ವ್ಯಕ್ತವಾಗಿದೆ.

ಈ ಕುರಿತು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಸ್ಪಷ್ಟನೆ ಕೇಳಿವೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ