ಸಂಸತ್ ಚುನಾವಣೆ ಗೆಲ್ಲಲು ಇನ್ನೊಂದು ಪುಲ್ವಾಮಾ ರೀತಿಯ ದಾಳಿ ನಡೆಯಬಹುದು: ಮೋದಿ ವಿರುದ್ಧ ಠಾಕ್ರೆ ಕಿಡಿ

ಕರಾವಳಿ ಕರ್ನಾಟಕ ವರದಿ

ಮುಂಬೈ:
ಲೋಕಸಭಾ ಚುನಾವಣೆ ಗೆಲ್ಲುವ ಸಲುವಾಗಿ  ಚುನಾವಣೆಗೆ ಮುನ್ನ ಇನ್ನೊಂದು ಪುಲ್ವಾಮಾ ರೀತಿಯ ದಾಳಿ ದಾಳಿ ನಡೆಯಬಹುದು ಎಂದು ಎಂಎನ್ಎಸ್ ನಾಯಕ ರಾಜ್ ಠಾಕ್ರೆ ಹೇಳಿದ್ದಾರೆ. ನರೇಂದ್ರ ಮೋದಿ ಸರ್ಕಾರ ಸೇನಾಪಡೆಗೆ ಅವಮಾನ ಮಾಡುತ್ತಿದೆ ಎಂದು ರಾಜ್ ಠಾಕ್ರೆ ಕಿಡಿಕಾರಿದ್ದಾರೆ.

‘ರಾಫೇಲ್ ಯುದ್ಧ ವಿಮಾನಗಳು ಇದ್ದರೆ ಬಾಲಕೋಟ್ ಮೇಲಿನ ದಾಳಿಯ ಸ್ವರೂಪ ಇನ್ನಷ್ಟು ತೀವ್ರವಾಗಿರುತ್ತಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಸೇನಾಪಡೆಗೆ ಅವಮಾನ ಮಾಡುವಂತಹ ಹೇಳಿಕೆಯಾಗಿದೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ರಾಜ್ ಠಾಕ್ರೆ ಮಾತನಾಡುತ್ತಿದ್ದರು.

ಪುಲ್ವಾಮಾ ದಾಳಿಯಲ್ಲಿ 40 ಯೋಧರು ಹುತಾತ್ಮರಾದರು. ಪುಲ್ವಾಮಾ ದಾಳಿಯ ಬಗ್ಗೆ ಗುಪ್ತಚರ ವರದಿಗಳು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದವು. ಆದರೂ ಆ ವರದಿಗಳನ್ನು ಮೋದಿ ಸರ್ಕಾರ ನಿರ್ಲಕ್ಷಿಸಿತು. ಈಗಲೂ ನಾವು ಪ್ರಶ್ನೆ ಕೇಳಬಾರದು ಎಂದರೆ ಹೇಗೆ ಎಂದು ರಾಜ್ ಠಾಕ್ರೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಬಾಲಕೋಟ್ ದಾಳಿಯಲ್ಲಿ 250 ಉಗ್ರರು ಹತರಾದರು ಎಂದು ಹೇಳುವ ಅಮಿತ್ ಶಾ ದಾಳಿಯ ವೇಳೆ ವಿಮಾನದ ಸಹಪೈಲಟ್ ಆಗಿದ್ದರೆ ಎಂದು ಲೇವಡಿ ಮಾಡಿದ ರಾಜ್ ಠಾಕ್ರೆ ಭಾರತದ ವಾಯುಪಡೆ ಮೋದಿ ಸರ್ಕಾರ ನೀಡಿದ ತಪ್ಪು ಮಾಹಿತಿಯಿಂದಾಗಿ ದಾಳಿಯಲ್ಲಿ ಗುರಿ ತಪ್ಪಿದೆ ಎಂದು ಹೇಳಿದರು.

ಸುಳ್ಳು ಹೇಳಲಿಕ್ಕೂ ಒಂದು ಮಿತಿ ಇದೆ. ಚುನಾವಣೆಯಲ್ಲಿ ಗೆಲ್ಲಲು ಮೋದಿ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದ್ದಾರೆ. ಚುನಾವಣೆಯನ್ನು ಗೆಲ್ಲಲು ಇನ್ನೊಂದು ಪುಲ್ವಾಮಾ ರೀತಿಯ ದಾಳಿ ಮುಂದಿನ ಒಂದೆರಡು ತಿಂಗಳಲ್ಲಿ ಆದರೂ ಆಗಬಹುದು. 2017ರಲ್ಲಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮೊದಲು ಪಠಾನ್‌ಕೋಟ್ ದಾಳಿ ನಡೆದಿರಲಿಲ್ಲವೆ, ಅಂತೆಯೆ ಈ ದಾಳಿಯೂ ನಡೆಯಲಿದೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ