ಪ್ರಚಾರಕ್ಕೆ ಸೇನೆಯನ್ನು ಬಳಸಬೇಡಿ: ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳಿಗೆ ಆಯೋಗ ಎಚ್ಚರಿಕೆ

ಕರಾವಳಿ ಕರ್ನಾಟಕ ವರದಿ

ನವದೆಹಲಿ
: ಭಾರತ ಇತ್ತೀಚೆಗೆ ಪಾಕಿಸ್ತಾನದ ಮೇಲೆ ನಡೆಸಿದ ವಾಯುದಾಳಿಯ ಬಳಿಕ ಭಾರತೀಯ ಜನತಾ ಪಕ್ಷವು ಅಲ್ಲಲ್ಲಿ ಸೇನೆ ಮತ್ತು ಸೈನಿಕರ ಚಿತ್ರಗಳನ್ನು ಬಳಸಿ ಚುನಾವಣಾ ಪ್ರಚಾರ ನಡೆಸುತ್ತಿರುವುದನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿದೆ.

 ಚುನಾವಣಾ ಪ್ರಚಾರಕ್ಕೆ ಸೇನೆ ಹಾಗೂ ಸೈನಿಕರ  ಚಿತ್ರಗಳನ್ನು ರಾಜಕೀಯ ಪಕ್ಷಗಳು, ಮುಖಂಡರು ಬಳಸಿಕೊಳ್ಳುವಂತಿಲ್ಲ ಎಂದು ಚುನಾವಣಾ ಆಯೋಗ ಇಂದು  ಮಹತ್ವದ ಆದೇಶ ಹೊರಡಿಸಿದೆ.

ಭದ್ರತಾ ಪಡೆಗಳು  ರಾಜಕೀಯ ವ್ಯವಸ್ಥೆ, ಭದ್ರತೆಯ ರಕ್ಷಕರಾಗಿದ್ದು, ಆಧುನಿಕ ಪ್ರಜಾಪ್ರಭುತ್ವದಲ್ಲಿ ತಟಸ್ಥ ಪಾಲುದಾರರಾಗಿದ್ದಾರೆ. ಆದ್ದರಿಂದಾಗಿ  ರಾಜಕೀಯ ಪಕ್ಷಗಳು ಹಾಗೂ ಮುಖಂಡರು ಯಾವುದೇ ಕಾರಣಕ್ಕೂ ಪ್ರಚಾರದ ಸಂದರ್ಭದಲ್ಲಿ ಸೇನೆಯ ಹಾಗೂ ಸೈನಿಕರ ಚಿತ್ರಗಳನ್ನು ಬಳಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಚುನಾವಣಾ ಪ್ರಚಾರ ಅಥವಾ ಜಾಹಿರಾತುಗಳಲ್ಲಿ ಸೇನೆಯ, ಸೈನಿಕರ ಚಿತ್ರಗಳನ್ನು ಬಳಸದಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿಗಳಿಗೆ  ಸಲಹೆ ನೀಡುವಂತೆ  ಚುನಾವಣಾ ಆಯೋಗ ಸೂಚಿಸಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ