ಬುರುಡೆ ಫಾಲ್ಸ್‌: ಸೆಲ್ಫೀ ತೆಗೆಯುವಾಗ ಆಯತಪ್ಪಿದ ಮೂವರು ಯುವಕರು ನೀರುಪಾಲು

ಕರಾವಳಿ ಕರ್ನಾಟಕ ವರದಿ
   
ಸಿದ್ದಾಪುರ:
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬುರುಡೆ ಫಾಲ್ಸ್‌ಗೆ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾದ ದುರ್ಘ‌ಟನೆ ಶನಿವಾರ ನಡೆದಿದೆ.

ನೀರುಪಾಲಾದ ಯುವಕರು ಶಿರಸಿ ಮೂಲದ ಮುರಳಿ (24), ಸಿದ್ಧಾಪುರದ ಅಭಿಷೇಕ್‌ ನಾಯ್ಕ ಮತ್ತು ಆಯುರ್ವೇದ ಕಾಲೇಜಿನ ವಿದ್ಯಾರ್ಥಿಯಾಗಿರುವ ಸಾಯಿ ಎಂದು ಗುರುತಿಸಲಾಗಿದೆ.

ಮೂವರು ಜೊತೆಯಾಗಿ ಸೆಲ್ಫೀ ತೆಗೆಯುವ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಶವಗಳನ್ನು  ಮೇಲಕ್ಕೆತ್ತಿದ್ದಾರೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ