ದೇವೇಗೌಡರು ತನಗೆ 28 ಮಕ್ಕಳಿಲ್ಲವಲ್ಲಾ ಎಂದು ಕೊರಗುತ್ತಿದ್ದಾರೆ: ಈಶ್ವರಪ್ಪ ವ್ಯಂಗ್ಯ

ಕರಾವಳಿ ಕರ್ನಾಟಕ ವರದಿ

ಬಾಗಲಕೋಟೆ
: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ತಮಗೆ 28 ಮಕ್ಕಳಿಲ್ಲವಲ್ಲಾ ಎಂದು ಕೊರಗುತ್ತಿದ್ದಾರೆ. ಇದ್ದಿದ್ದರೆ ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಅವರನ್ನೇ ಅಭ್ಯರ್ಥಿಗಳನ್ನಾಗಿ ನಿಲ್ಲಿಸುತ್ತಿದ್ದರು ಎಂದು ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ .

ದೇವೇಗೌಡರಿಗೆ 14 ಮಕ್ಕಳಿದ್ದರೂ ಉಳಿದ 14 ಕ್ಷೇತ್ರಗಳಿಗೆ ಸೊಸೆಯಂದಿರನ್ನು ನಿಲ್ಲಿಸುತ್ತಿದ್ದರು ಎಂದು ಈಶ್ವರಪ್ಪ ಹೇಳಿದ್ದಾರೆ.

ಸುಮಲತಾ ಅಂಬರೀಶ್‌ ಅವರು ನನಗೆ ಸಹೋದರಿಗೆ ಸಮಾನ. ಅವರ ವಿರುದ್ಧ  ಅವಮಾನಕರ ಹೇಳಿಕೆ ನೀಡಿದ ಸಚಿವ ರೇವಣ್ಣ ಕ್ಷಮೆ ಕೇಳಬೇಕು. ಅಲ್ಲವಾದಲ್ಲಿ ತೆನೆ ಹೊತ್ತ ಮಹಿಳೆ ಚಿಹ್ನೆಯನ್ನು ಬಳಸಿಕೊಳ್ಳುವ ಹಕ್ಕು ಜೆಡಿಎಸ್‌ಗೆ ಇರುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ