ಹೆಮ್ಮಾಡಿ ಗುಲಾಬಿ ಕೊಲೆ ಪ್ರಕರಣ: ಬೆಂಗಳೂರಿನಲ್ಲಿ ಓರ್ವ ಆರೋಪಿ ಸೆರೆ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಮೀನು ವ್ಯಾಪಾರಿ ಹೆಮ್ಮಾಡಿಯ ಗುಲಾಬಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಮ್ದು ತಿಳಿದುಬಂದಿದೆ. ಬಂಧಿತ ಆರೋಪಿಯನ್ನು ಕುಂದಾಪುರ ತಾಲೂಕಿನ ಮುದೂರು ನಿವಾಸಿ ರವಿರಾಜ ಎಂದು ಗುರುತಿಸಲಾಗಿದೆ.

ಗುಲಾಬಿ (55) ಮಾರ್ಚ್ 1ನೆ ತಾರೀಕಿನಂದು ಹೆಮ್ಮಾಡಿಯಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಗುಲಾಬಿ ಮೈ ಮೇಲೆ ಇದ್ದ ಆಭರಣಗಳನ್ನು ಸಹ ದೋಚಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಶವದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಆಸ್ಪತ್ರೆಯಲ್ಲಿ ನಡೆಸಿದ್ದು ಗುಲಾಬಿ ಅವರನ್ನು ಕೊಲೆ ಮಾಡಲಾಗಿತ್ತು ಎಂದು ದೃಢಪಟ್ಟಿತ್ತು.

ಆರೋಪಿಗಳಿಗಾಗಿ ತಂಡಗಳನ್ನು ರಚಿಸಿ ಶೋಧ ನಡೆಸುತ್ತಿದ್ದ ಕುಂದಾಪುರ ಪೊಲೀಸರು ಇದೀಗ ಓರ್ವ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ