ದಾಳಿ ಮಾಡುವುದಷ್ಟೇ ನಮ್ಮ ಕೆಲಸ, ಶವಗಳನ್ನು ಎಣಿಸುವುದಲ್ಲ: ಏರ್ ಚೀಫ್ ಮಾರ್ಷಲ್ ಧನೋವಾ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಯೋಜನೆಯಂತೆ ಗುರಿಗಳ ಮೇಲೆ ದಾಳಿ ಮಾಡುವುದಷ್ಟೇ ನಮ್ಮ ಕೆಲಸವಾಗಿತ್ತು. ಆದರೆ ಅಲ್ಲಿ ಸಂಭವಿಸಿದ ಸಾವು-ನೋವುಗಳ ಲೆಕ್ಕಾಚಾರ ನಮ್ಮ ಕೆಲಸವಲ್ಲ ಎಂದು ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಹೇಳಿದ್ದಾರೆ.

ಬಾಲಾಕೋಟ್ ನಲ್ಲಿದ್ದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಕ್ಯಾಂಪ್ ಗಳ ಮೇಲೆ ವಾಯುಸೇನೆ ದಾಳಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿರುವ ವಿವಾದಗಳ ಕುರಿತು ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಅವರು ಸ್ಪಷ್ಟನೆ ನೀಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಾಯುಸೇನೆ ದಾಳಿ ಸಂಬಂಧ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆಯ ವಾಯುಸೇನೆ ಸಾಮರ್ಥ್ಯದ ಬಗ್ಗೆ ಶಂಕೆ ಬೇಡ. ವಾಯುಸೇನೆ ಸಮರ್ಥವಾಗಿದ್ದು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸದಾ ಸನ್ನದ್ಧವಾಗಿರುತ್ತದೆ ಎಂದು ಹೇಳಿದ್ದಾರೆ.

ಅಂತೆಯೇ ಉಗ್ರ ಕ್ಯಾಂಪ್ ಗಳ ಮೇಲಿನ ದಾಳಿ ಕುರಿತು ಮಾತನಾಡಿದ ಧನೋವಾ ಅವರು, ಪೂರ್ವ ಯೋಜನೆಯಂತೆ ನಾನು ನಿಗದಿ ಪಡಿಸಿದ್ದ ಗುರಿಗಳ ಮೇಲೆ ನಾವು ದಾಳಿ ಮಾಡಿದ್ದೇವೆ. ಆದರೆ ಅಲ್ಲಿ ಸಂಭವಿಸಿರಬಹುದಾದ ಸಾವುನೋವುಗಳ ಕುರಿತ ಲೆಕ್ಕಾಚಾರವನ್ನು ನಾವು ಮಾಡಿಲ್ಲ. ಅದೇನಿದ್ದರೂ ಅಲ್ಲಿನ ಸರ್ಕಾರದ ಕೆಲಸವಷ್ಟೇ.. ಸಾವುನೋವಿನ ಕುರಿತು ಸ್ಪಷ್ಟನೆ ನೀಡುವ ಜವಾಬ್ದಾರಿ ನಮ್ಮದಲ್ಲ ಎಂದು ಹೇಳಿದ್ದಾರೆ.

ನಾವು ಒಂದು ವೇಳೆ ಅರಣ್ಯದ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ದರೆ ಅವರೇಕೆ ಇಷ್ಟು ಗಂಭೀರವಾಗಿ ಪ್ರತಿಕ್ರಿಯಿಸುತ್ತಿದ್ದರು. ಅವರೂ ಕೂಡ ವಾಯುಗಡಿ ಉಲ್ಲಂಘಿಸುವ ಪ್ರಯತ್ನವನ್ನೇಕೆ ಮಾಡಿದರು ಎಂದು ಪ್ರಶ್ನಿಸಿದರು.

 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ