ಝೀ ಸರಿಗಮಪ: ಉಡುಪಿಯ ಕೀರ್ತನ್ ಹೊಳ್ಳ ಚಾಂಪಿಯನ್, ಹನುಮಂತ ರನರ್ ಅಪ್

ಕರಾವಳಿ ಕರ್ನಾಟಕ ವರದಿ

ಬೆಂಗಳೂರು
: ಕನ್ನಡದ ಝೀ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಸೀಸನ್ 15 ಚಾಂಪಿಯನ್ ಆಗಿ ಕೀರ್ತನ್ ಹೊಳ್ಳ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಸರಿಗಮಪ ಸೀಸನ್ 15 ಕಾರ್ಯಕ್ರಮದ ಫೈನಲ್‍ನಲ್ಲಿ ತಮ್ಮ ಅದ್ಭುತ ಗಾಯನದ ಮೂಲಕ ಕೀರ್ತನ್ ಹೊಳ್ಳ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಬೆಂಗಳೂರಿನ ಕೋರಮಂಗಲದ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಕೀರ್ತನ್ ಹೊಳ್ಳ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಫೈನಲ್ ನಲ್ಲಿ ಕೀರ್ತನ್ ಹೊಳ್ಳ ಅವರಿಗೆ ಗ್ರಾಮೀಣ ಪ್ರತಿಭೆ ಹನುಮಂತ ಹಾಗೂ ಸಾದ್ವಿನಿ ತಮ್ಮ ಅದ್ಬುತ ಗಾಯನದ ಮೂಲಕ ತೀವ್ರ ಪೈಪೋಟಿ ನೀಡಿದರು.

ಅಂತಿಮವಾಗಿ ಕೀರ್ತನ್ ಹೊಳ್ಳ ಚಾಂಪಿಯನ್ ಆಗಿದ್ದು, ಹನುಮಂತ ರನ್ನರ್ ಅಪ್ ಆಗಿದ್ದಾರೆ. ಟಾಪ್ 3 ಕಂಟಸ್ಟೆಂಟ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹನುಮಂತು, ಕೀರ್ತನ್ ಹೊಳ್ಳ ಹಾಗೂ ಸಾದ್ವಿನಿ ತೀರ್ಪುಗಾರರನ್ನೇ ಅಚ್ಚರಿಗೊಳಿಸುವಂತ ಹಾಡನ್ನು ಹಾಡಿ ರಂಜಿಸಿದರು. ಕೊನೆಗೆ ಓಟಿಂಗ್ ಆಧಾರ ಹಾಗೂ ತೀರ್ಪುಗಾರರ ವೋಟಿಂಗ್ ಎರಡನ್ನೂ ಗಮನದಲ್ಲಿಟ್ಟು, ಸೀಸನ್ 15 ರ ವಿನ್ನರ್ ಕೀರ್ತನ್ ಹೊಳ್ಳ ಎಂದು ಘೋಷಿಸಲಾಗಿದೆ.

ಕೀರ್ತನ್ ಗೆ ಕಾನ್ಫಿಡೆಂಟ್ ಗ್ರೂಪ್ ಕಡೆಯಿಂದ 35 ಲಕ್ಷ ಮೌಲ್ಯದ 3 ಬಿ ಹೆಚ್ ಕೆ ಅಪಾರ್ಟ್ ಮೆಂಟ್ ಸಿಕ್ಕಿದೆ. ಇದರ ಜೊತೆಗೆ ಜೀ ಕನ್ನಡ ವಾಹಿನಿಯ ವಿನ್ನರ್ ಟ್ರೋಫಿ ಅವರ ಪಾಲಾಗಿದೆ

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ