ಆಪರೇಷನ್‌ ಕಮಲ ಆಡಿಯೋ : ಬಿಎಸ್‌ವೈ ವಿರುದ್ಧದ ವಿಚಾರಣೆಗೆ ತಡೆ

ಕರಾವಳಿ ಕರ್ನಾಟಕ ವರದಿ

ಕಲಬುರಗಿ
: ಆಪರೇಷನ್‌ ಕಮಲ ಆಡಿಯೋ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್‌. ಯಡಿಯೂರಪ್ಪ ಮತ್ತು ಇತರ ಮೂವರ ವಿರುದ್ಧ ರಾಯಚೂರು ಜಿಲ್ಲೆ ದೇವ ದುರ್ಗ ಠಾಣೆಯಲ್ಲಿ ದಾಖ ಲಾಗಿರುವ ಎಫ್‌ಐಆರ್‌ನ ವಿಚಾರಣೆ ಮತ್ತು ತನಿಖೆಗೆ ಹೈಕೋರ್ಟ್‌ ಪೀಠ ಮಧ್ಯಾಂತರ ತಡೆಯಾಜ್ಞೆ ನೀಡಿದೆ.

ಯಡಿಯೂರಪ್ಪ, ಶಾಸಕ ರಾದ ಶಿವನಗೌಡ ನಾಯಕ ಮತ್ತು ಪ್ರೀತಂ ಗೌಡ, ಹಿರಿಯ ಪತ್ರಕರ್ತ ಎಂ.ಬಿ. ಮರಮಕಲ್‌ ವಿರುದ್ಧ ದೇವದುರ್ಗ ಠಾಣೆಯಲ್ಲಿ ದಾಖಲಾಗಿ ರುವ ಎಫ್ಐಆರ್‌ ರದ್ದು ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಪೀಠ, ಬುಧವಾರ ಆದೇಶ ಕಾಯ್ದಿರಿಸಿತ್ತು.

ಶುಕ್ರವಾರ ನ್ಯಾಯಮೂರ್ತಿ ಪಿಜಿಎಂ ಪಾಟೀಲ ಅವರು, ಈ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿ, ದೂರುದಾರ ಶರಣಗೌಡ ಕಂದಕೂರ ಅವರಿಗೆ ನೋಟಿಸ್‌ ಜಾರಿ ಮಾಡಿ ದರು. ಆದರೆ ಈ ಪ್ರಕರಣ ರದ್ದು ಮಾಡ ಬೇಕೆಂಬ ಮನವಿ ಯನ್ನು ಮಾನ್ಯ ಮಾಡಲಿಲ್ಲ. ಈ ಮಧ್ಯೆ, ಬೀದರ್‌ ಜಿಲ್ಲೆ ಹುಮನಾ ಬಾದ್‌ ನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಯಡಿಯೂರಪ್ಪ, ಹೈಕೋರ್ಟ್‌ ಪೀಠ ಮಧ್ಯಾಂತರ ತಡೆಯಾಜ್ಞೆ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ