ಚಿತ್ರರಂಗದಲ್ಲಿ ವಿಶಿಷ್ಠ ರೀತಿಯ ವಾಹನಗಳನ್ನು ನಿರ್ಮಿಸುತ್ತಲಿದ್ದ ದಿಲೀಪ್ ರಾಜ್ ನಿಧನ

ಮಝರ್ ಕುಂದಾಪುರ/ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಮೂಲತಃ ಕುಂದಾಪುರದ ನಾಗೂರಿನ ನಿವಾಸಿ ಯಾಗಿದ್ದು,ಕನ್ನಡ ಹಾಗೂ ಇನ್ನಿತರ ಭಾಷೆಯ ಚಲನ ಚಿತ್ರರಂಗದಲ್ಲಿ  ಹಲವು ವರ್ಷಗಳಿಂದ ಸಕ್ರಿಯರಾಗಿದ್ದು, ಬೈಕ್ ಕಾರುಗಳನ್ನು ವಿಶಿಷ್ಠ ರೀತಿಯಲ್ಲಿ ಸಜ್ಜು ಗೊಳಿಸುತ್ತಿದ್ದ ದಿಲೀಪ್ ರಾಜ್(48) ಅವರು ಬೆಂಗಳೂರಿನ ತನ್ನ ನಿವಾಸದಲ್ಲಿ ನಿನ್ನೆ (ಶುಕ್ರವಾರ)ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಶುಕ್ರವಾರ ಸಂಜೆ ಅವರಿಗೆ ಅವರ ಮನೆಯಲ್ಲಿದ್ದಾಗ ಹೃದಯಾಘಾತವಾಗಿದೆ. ಮನೆಯಿಂದ ಜಯದೇವ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಕನ್ನಡ  ಚಿತ್ರರಂಗದ ಹಲವಾರು ನಾಯಕ ನಟರೊಂದಿಗೆ, ನಿರ್ದೇಶಕ ನಿರ್ಮಾಪಕರೊಂದಿಗೆ ಒಡನಾಟಹೊಂದಿದ್ದ ಅವರು. ಕಿರಿಕ್ ಪಾರ್ಟಿ, ರಾಜರಥ, ಅಣ್ಣಾ ಬಾಂಡ್, ಉಪ್ಪಿ-2 ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿಗಾಗಿ ತನ್ನದೇ ವರ್ಕ ಶಾಪ್ ನಲ್ಲಿ  ವಿಶಿಷ್ಟ ಶೈಲಿಯ ಬೈಕ್  ಕಾರುಗಳನ್ನು ಸಿದ್ಧಪಡಿಸಿ ಜನಪ್ರಿಯರಾಗಿದ್ದರು. ಸಿನೆಮಾಗಳಿಗಾಗಿಯೇ ಅವರು ಸಿದ್ಧಪಡಿಸಿದ ವಾಹನಗಳು ಆಕರ್ಷಣೆ ಪಡೆದುಕೊಂಡಿದ್ದವು

ಸೋಮಕ್ಷತ್ರೀಯ ಗಾಣಿಗ ಸಮಾಜದಲ್ಲಿ ಅತ್ಯಂತ ಚಟುವಟಿಕೆಯಿಂದಿದ್ದ ದಿಲೀಪ್ ರಾಜ್ ಇತ್ತೀಚಿಗೆ ನಡೆದ ಸಮಾಜದ ಕಾರ್ಯಕ್ರಮ ಪ್ರತಿಭಾ ಸಂಭ್ರಮದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಲವಲವಿಕೆಯಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ರು. ಇದ್ದಕ್ಕಿದ್ದಂತೆ ಹೃದಯಾಘಾತಕ್ಕೊಳಗಾಗಿ ಅಸುನೀಗಿರುವುದು ಅವರ ಕುಟುಂಬ ಹಾಗೂ ಅವರ ಸಮಾಜ ಭಾಂಧವರಲ್ಲಿ  ಹಾಗೂ ಅಬಿಮಾನಿಗಳಲ್ಲಿ ದಿಗ್ಭ್ರಮೆ ಮೂಡಿಸಿದೆ. 

ದಿಲೀಪ್ ರಾಜ್ ಅವರು, ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಇಹಲೋಕ ಯಾತ್ರೆ ಮುಗಿಸಿದ್ದಾರೆ. ದಿಲೀಪ್ ರಾಜ್  ಅವರನ್ನು ಕಳೆದುಕೊಂಡಿರುವ ಅವರ ಕುಟುಂಬ ಹಾಗೂ ಚಿತ್ರರಂಗ ಕಂಬನಿ ಮಿಡಿದಿದೆ. ಅವರ ಹುಟ್ಟೂರಾದ ಕುಂದಾಪುರದ ನಾಗೂರಿನಲ್ಲಿ ಶನಿವಾರ ಅವರ ಅಂತ್ಯಕ್ರಿಯೆ ಜರಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ