ಭಂಡಾರ್ಕಾರ್ಸ್ ವಿದ್ಯಾರ್ಥಿಗಳಿಗೆ ರಾಡ್ನಿಂದ ಹಲ್ಲೆ: ಓರ್ವ ಸೆರೆ

ಕರಾವಳಿ ಕರ್ನಾಟಕ ವರದಿ
ಕುಂದಾಪುರ
: ಬೆಂಗಳೂರು ಮುಂತಾದ ಕಡೆ ಹಾಡು ಹಗಲೆ ರಸ್ತೆಯಲ್ಲಿ ರೌಡಿಗಳು ರಾಡ್, ತಲವಾರುಗಳಿಂದ ಹಲ್ಲೆ ನಡೆಸುವಂತೆ ಕರಾವಳಿಯ ಕುಂದಾಪುರ ನಗರದ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಡುಗಳಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ,

ಬಂಧಿತನನ್ನು ಕಿರಿಮಂಜೇಶ್ವರದ ಸುಬ್ರಹ್ಮಣ್ಯ ಶೆಟ್ಟಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿ ಯುವಕರ ಗುಂಪು ಮಧ್ಯಾಹ್ನ ಊಟದ ಸಮಯದಲ್ಲಿ ಭಂಡಾರ್ಕಾರ್ಸ್ ಕಾಲೇಜು ವಿದ್ಯಾರ್ಥಿಗಳನ್ನು ರಾಡುಗಳಿಂದ ಥಳಿಸಿತ್ತು. ಹಲ್ಲೆಯಿಂದ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಗೋಪಾಡಿ ನಿವಾಸಿ ಭಂಡಾರ್ಕಾರ್ಸ್ ದ್ವಿತೀಯ ಬಿಕಾಂ ವಿದ್ಯಾರ್ಥಿ ಮಿಥುನ್ ಮತ್ತು ಇನ್ನೋರ್ವ ಅಕ್ಷಯ್ ತೀವೃವಾಗಿ ಗಾಯಗೊಂಡಿದ್ದ.

ನಾಡ ಗುಡ್ಡೆಅಂಗಡಿಯಿಂದ ಬಂದ ವಿದ್ಯಾರ್ಥಿಗಳ ತಂಡ ಹಲ್ಲೆಗೈದಿದೆ ಎನ್ನಲಾಗಿತ್ತು.

ಜನನಿಬಿಡವಾದ ಕಾಲೇಜು ರಸ್ತೆಯಲ್ಲೆ ಈ ಹಲ್ಲೆ ನಡೆದಿದ್ದು ಹಲ್ಲೆ ತಡೆಯಲು ಯತ್ನಿಸಿದ ಪುರಸಭಾ ಸದಸ್ಯ ಗಿರೀಶ್ ಅವರಿಗೂ ದುಷ್ಕರ್ಮಿಗಳು ಹಲ್ಲೆ ಬೆದರಿಕೆ ಒಡ್ಡಿದ್ದು, ಕಾರ್ ಕೀಗಳನ್ನು ಕಸಿದಿದ್ದರು. ಈ ಮಾರಾಮಾರಿಯ ವಿಡಿಯೊ ಕ್ಲಿಪಿಂಗ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು,  ವಿದ್ಯಾರ್ಥಿಗಳ ಈ ಭೀಕರ ಹಲ್ಲೆ ಸಾರ್ವಜನಿಕರು ನೋಡುತ್ತಿರುವಂತೆಯೇ ನಡೆದಿದ್ದು, ಸಾರ್ವಜನಿಕರು ವಿದ್ಯಾರ್ಥಿಗಳ ಕ್ರಿಮಿನಲ್ ಕೃತ್ಯ ಕಂಡು ಬೆಚ್ಚಿದ್ದರು.

ಕಳೆದ ಕೆಲ ದಶಕಗಳಿಂದ ಶಾಂತವಾಗಿದ್ದ ಭಂಡಾರ್ಕಾರ್ಸ್ ಕಾಲೇಜು ಈಗ ಈ ವಿದ್ಯಾರ್ಥಿಗಳ ಹಲ್ಲೆಯಿಂದ ಮತ್ತೆ ಹಿಂದಿನ ಗಲಾಟೆಯ ದಿನಗಳನ್ನು ನೆನಪಿಸುವಂತೆ ಮಾಡಿದೆ

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ