ಕುಂದಾಪುರ: ಅಪಘಾತದಲ್ಲಿ ಸಿಂಗಾಪುರ ಉದ್ಯಮಿ ಸಾವು

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಹೊಂಡಾ ಆಕ್ಟೀವಾದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಲಾರಿ ಗುದ್ದಿದಾಗ ಸವಾರ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ. ಮೃತರನ್ನು ಮಾರ್ಕೋಡು ನಿವಾಸಿ ಶಂಕರನಾರಾಯಣ ಎಂಬವರ ಮಗ ವಿವೇಕಾನಂದ (42) ಎಂದು ಗುರುತಿಸಲಾಗಿದೆ.

ವಿವೇಕಾನಂದ ಅವರು ಸಹೋದರನೊಂದಿಗೆ ಸಿಂಗಾಪುರದಲ್ಲಿ ಹೊಟೇಲ್ ಉದ್ಯಮಿಯಾಗಿದ್ದು, ಫೆ.9ರಂದು ನಡೆಯಲಿದ್ದ ಪುತ್ರಿಯ ನಾಮಕರಣದಲ್ಲಿ ಬಾಗವಹಿಸಲು ಊರಿಗೆ ಬಂದಿದ್ದು, ಅಪಘಾತದಲ್ಲಿ ದಾರುಣ ಸಾವಪ್ಪಿದ್ದಾರೆ.

ಸಮಾರಂಭಕ್ಕೆ ಬೇಕಾದ ಸಾಮಗ್ರಿ ಖರೀದಿಸಿ ರಾತ್ರಿ ಮನೆಗೆ ತೆರಳುವ ಸಂದರ್ಭ ಸರ್ವೀಸ್ ರಸ್ತೆಯಲ್ಲಿ ಲಾರಿ ಡಿಕ್ಕಿಯಾಗಿತ್ತು. ನೆಲಕ್ಕೆ ಬಿದ್ದ ವಿವೇಕಾನಂದ ಅವರ ತಲೆಯ ಮೇಲೆ ಇನ್ಸುಲೇಟರ್ ಲಾರಿ ಚಕ್ರಗಳು ಹರಿದಿದ್ದವು. ಹೆಲ್ಮೆಟ್ ಪುಡಿಯಾಗಿ ತಲೆ ಒಡೆದು ವಿವೇಕಾನಂದ ಅವರು ದಾರುಣ ಸಾವಪ್ಪಿದ್ದಾರೆ.
ಮಗುವಿನ ನಾಮಕರಣಕ್ಕೆಂದು ಬುಧವಾರ ಸಂಜೆ ಊರಿಗೆ ಬಂದಿದ್ದ ಅವರ ಸಾವು ಕುಟುಂಬವನ್ನು ಶೋಕದ ಕಡಲಿನಲ್ಲಿ ಮುಳುಗಿಸಿದೆ.

ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಲಾರಿ ಚಾಲಕನನ್ನು ಬಂಧಿಸಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ