ಕೋಟ ಜೋಡಿ ಕೊಲೆ ಪ್ರಕರಣ: ಬಿಜೆಪಿ ಜಿಪಂ ಸದಸ್ಯ ಸೆರೆ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಕೋಟದಲ್ಲಿ ನಡೆದ ಇಬ್ಬರು ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿ.ಪಂ ಕೋಟ ಕ್ಷೇತ್ರದ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್(38) ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಆರಕ್ಕೆ ಏರಿದೆ.

ಜ.27 ರಂದು ನಡೆದ ಯುವಕರ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಫೆ. 7ರಂದು ಮಡಿಕೇರಿಯಲ್ಲಿ ರಾಜಶೇಖರ ರೆಡ್ಡಿ(44), ರವಿ ಯಾನೆ ಮೆಡಿಕಲ್ ರವಿ(42) ಎಂಬವರನ್ನು ಬಂಧಿಸಲಾಗಿದ್ದು. ರಾಘವೇಂದ್ರನನ್ನು ಇಂದು ಕೋಟದಲ್ಲಿ ಬಂಧಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಮಣೂರು ಗ್ರಾಮದ ಹರೀಶ್ ರೆಡ್ಡಿ(40), ಕೊಡವೂರು ಗ್ರಾಮದ ಮಹೇಶ್ ಗಾಣಿಗ(38), ಉಡುಪಿ ಲಕ್ಷ್ಮಿ ನಗರದ ರವಿಚಂದ್ರ ಪೂಜಾರಿ(23) ಎಂಬವರನ್ನು ಬಂಧಿಸಲಾಗಿದೆ.

ಕೊಲೆ ಆರೋಪಿಗಳು ರಾಘವೇಂದ್ರ ಕಾಂಚನ್ ಜೊತೆ ಸಂಪರ್ಕದಲ್ಲಿದ್ದರು. ಕೊಲೆ ನಡೆದ ರಾತ್ರಿಯೇ ರಾಘವೇಂದ್ರ ಕಾಂಚನ್ ಸಂಪರ್ಕಿಸಿದ್ದರು. ಪೊಲೀಸ್ ತನಿಖೆ ಸಂದರ್ಭ ರಾಘವೇಂದ್ರ ಕಾಂಚನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ