ಹೊನಲು ಬೆಳಕು ಪಂದ್ಯದ ಮೂಲಕ ಶಾಲಾ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ಚಾಂಪಿಯನ್ ಟ್ರೋಫಿ

ವರದಿ: ಖಲೀಲ್ ಕೆರಾಡಿ/ಕರಾವಳಿ ಕರ್ನಾಟಕ ವರದಿ

ದುಬೈ:
ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುವ ಮುಖೇನ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹೊನ್ನಾಳದ ಹಳೆ ವಿದ್ಯಾರ್ಥಿ ಸಂಘ ಯು.ಎ.ಈ  ಘಟಕ ಹೊಸ ದಾಖಲೆಯನ್ನೆ ನಿರ್ಮಿಸಿದೆ.

 ಜನವರಿ 24 2019 ರಂದು ಪ್ರಪ್ರಥಮ ಬಾರಿಗೆ ಅಲ್-ನಾಹದಾದ ದುಬೈ ಸ್ಕಾಲರ್ ಸ್ಕೂಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಚಾಂಪಿಯನ್ ಟ್ರೋಫಿ ಲೀಗ್ ಪಂದ್ಯಾಕೂಟ ಬಹಳ ಯಶಸ್ವಿಯೊಂದಿಗೆ ಮುಕ್ತಾಯಗೊಂಡಿತು. ಈ ಪಂದ್ಯಾಕೂಟದಲ್ಲಿ ಹೊನ್ನಾಳದ  5  ತಂಡಗಳು ಭಾಗವಹಿಸಿದ್ದವು. ಜಾಕೀರ್ ಬಿ.ಆರ್ ಮುಂದಾಳತ್ವದ ಹಾಗೂ ಅಯಾಜ್ ಖಾನ್ ನಾಯಕತ್ವದ ಹೊನ್ನಾಳ ಸೂಪರ್ ಕಿಂಗ್ಸ್, ಇಬಾದ್ ಮುಂದಾಳತ್ವದ ಹಾಗೂ ರಾಹೀಲ್ ನಾಯಕತ್ವದ  ರಾಯಲ್‌ ಚಾಲೆಂಜರ್ಸ್ ಹೊನ್ನಾಳ, ಫೀರೋಜ್ ಖಾಜಿ ಮುಂದಾಳತ್ವದ ಹಾಗೂ ನಯಾಜ್ .ಜೆ ನಾಯಕತ್ವದ ಹೊನ್ನಾಳ ಡೆಕ್ಕನ್ ಚಾರ್ಜರ್ಸ್, ಅಬ್ದುಲ್ ರಜಾಕ್ ಮುಂದಾಳತ್ವದ ಹಾಗೂ ಮುಹಮ್ಮದ್ ನಾಯಕತ್ವದ, ಕಿಂಗ್ಸ್ ಇಲೆವೆನ್ ಹೊನ್ನಾಳ ಅಶ್ಫಾಕ್.ಜೆ ಮುಂದಾಳತ್ವದ ಹಾಗೂ ಅಖ್ತರ್ ನಾಯಕತ್ವದ ಹೊನ್ನಾಳ ನೈಟ್ ರೈಡರ್ಸ್ ತಂಡಗಳು ಭಾಗವಹಿಸಿದ್ದವು.

 ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹೊನ್ನಾಳಕ್ಕೆ ಸದಾ ಬೆನ್ನೆಲುಬಾಗಿ ನಿಂತಿರುವ ಜಮೇದಾರ್ ಅಶ್ಫಾಕ್, ಇಂಬ್ರೆಜ್ ಸಾಹೇಬ್, ಜಾಕೀರ್ ಬಿ.ಆರ್, ಫೀರೋಜ್ ಖಾಜಿ, ಸೇಠ್ ಇಬಾದ್, ಅಬ್ದುಲ್ ರಜಾಕ್, ಅಯಾಜ್ ಖಾನ್, ರಾಹೀಲ್, ವಸೀಮ್, ಅಫ್ತಾಬ್ ಇನ್ನೂ ಹಲವರು ಸೇರಿ ಈ ಪಂದ್ಯಾಕೂಟ ಆಯೋಜಿಸಿ  ಶಾಲೆಗೆ ಬೇಕಾಗಿರುವ ಸವಲತ್ತುಗಳನ್ನು ಒದಗಿಸಲು ಇನ್ನಷ್ಟು ಕೊಡುಗೈ ದಾನಿಗಳನ್ನು ತಲುಪುವುದೆ ಈ ಪಂದ್ಯಾಕೂಟದ ಪ್ರಮುಖ ಉದ್ದೇಶವಾಗಿದೆ ಎಂದರು ತಪ್ಪಾಗಲಾರದು.

ಲೀಗ್ ಪಂದ್ಯಾಕೂಟದಲ್ಲಿ ಪ್ರತಿ ತಂಡ ಒಂದೊಂದು ಪಂದ್ಯವನ್ನು ಗೆಲ್ಲುವ ಮೂಲಕ ಯಾವುದೇ ತಂಡಕ್ಕೂ ಸೆಮಿಫೈನಲ್ಸ್ ಪ್ರವೇಶ ಸುಲಭವಾಗಿರಲಿಲ್ಲ. ಅಂತಿಮವಾಗಿ ಚೀಟಿ ಎತ್ತುವ ಮುಖೇನ ಹೊನ್ನಾಳ ಸೂಪರ್ ಕಿಂಗ್ಸ್,ರಾಯಲ್ ಚಾಲೆಂಜರ್ಸ್ ಹೊನ್ನಾಳ, ಕಿಂಗ್ಸ್ ಇಲೆವೆನ್ ಹೊನ್ನಾಳ ಸೆಮಿಫೈನಲ್ ಗೆ ತೇರ್ಗಡೆ ಹೊಂದಿತು. ನಾಲ್ಕನೇ ಸೆಮಿಫೈನಲ್ಸ್ ತಂಡಕ್ಕಾಗಿ  ಹೊನ್ನಾಳ ಡೆಕ್ಕನ್ ಚಾರ್ಜರ್ಸ್ ಹಾಗೂ ನೈಟ್ ರೈಡರ್ಸ್ ಹೊನ್ನಾಳದ ನಡುವೆ ಸೂಪರ್‌ ಓವರ್ ಸೆಣಸಾಟ ನಡೆಯಿತು. ಕೊನೆಯ ತನಕ ರೋಮಾಂಚಕಾರಿಯಾಗಿ ಸಾಗಿದ ಪಂದ್ಯ ಅಂತಿಮವಾಗಿ ಹೊನ್ನಾಳ ಡೆಕ್ಕನ್ ಚಾರ್ಜರ್ಸ್ ಜಯಶಾಲಿಯಾಗಿ ಸೆಮಿಫೈನಲ್ ಪ್ರವೇಶಿಸಿತು. ಮೊದಲ ಸಮಿಫೈನಲ್ ಪಂದ್ಯದಲ್ಲಿ ಹೊನ್ನಾಳ ಸೂಪರ್ ಕಿಂಗ್ಸ್ , ರಾಯಲ್ ಚಾಲೆಂಜರ್ಸ್ ಹೊನ್ನಾಳವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಹೊನ್ನಾಳ ಡೆಕ್ಕನ್ ಚಾರ್ಜರ್ಸ್  ಹಾಗೂ ಕಿಂಗ್ಸ್ ಇಲೆವೆನ್ ಹೊನ್ನಾಳದ‌ ನಡುವೆ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿಜಯಿಯಾಗಿ ಫೈನಲ್ ಹಂತಕ್ಕೆ ತಲುಪಿತು.

ಅಂತಿಮವಾಗಿ ಸೂಪರ್ ಕಿಂಗ್ಸ್ ವತಿಯಿಂದ ವಸೀಮ್ ರವರ ಭರ್ಜರಿ ಬ್ಯಾಟಿಂಗ್ ನಿಂದ ಉತ್ತಮ‌ ಮೊತ್ತವನ್ನು ಕಲೆಹಾಕಿತ್ತು ಆದರೆ ಡೆಕ್ಕನ್ ಚಾರ್ಜರ್ಸ್ ನ ಕಪ್ತಾನ ನಯಾಜ್ ರವರ ಅಧ್ಬುತ ಪದರ್ಶನದ ಮೂಲಕ ಪಂದ್ಯ ಕೊನೆಯ ಎಸೆತದ ತನಕ  ಸಾಗಿ ಅಂತಿಮವಾಗಿ  ಡೆಕ್ಕನ್ ಚಾರ್ಜರ್ಸ್ ಚಾಂಪಿಯನ್ ಆಗಿ ಹೊರ ಹೊಮ್ಮಿತು. ನಯಾಜ್ .ಜೆ ಪೈನಲ್ ಪಂದ್ಯದ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಗೆ ಆಯ್ಕೆಯಾದರು.

ಉದ್ಘಾಟನಾ ಸಮಾರಂಭದಲ್ಲಿ ಸಿ.ಎ ಹನೀಫ್ ಅಬುಧಾಬಿ,   , ಶಬ್ಬೀರ್ ಸಾಹೇಬ್ ದುಬೈ, ರಿಯಾಜ್ ಮನೆಗರ್ ದುಬೈ,  ಮತೀನ್ ಅಹ್ಮದ್ ಚಿಲ್ಮಿ ದುಬೈ ಹಾಗೂ ಮುಹಮ್ಮದ್ ಅಯ್ಯೂಬ್  ಹಾಗೂ ಇನ್ನಿತರರು ಅತಿಥಿಗಳಾಗಿ ಆಗಮಿಸಿದ್ದರು. ಬಂದಂತಹ ಅತಿಥಿಗಳು ಶಾಲೆಯ ಅಭಿವೃದ್ಧಿಗೆ ಸಂಪೂರ್ಣ ‌ಸಹಕಾರ‌ವನ್ನು ನೀಡುವ ಭರವಸೆ ನೀಡಿದರು.   ಅತಿಥಿಗಳನ್ನು ಸ್ವಾಗತಿಸುತ್ತ ಹಳೆ ವಿದ್ಯಾರ್ಥಿ ಸಂಘ ಯು.ಎ.ಈ ಘಟಕದ ಅಧ್ಯಕ್ಷರು ಆದ ಅಶ್ಫಾಕ್ ರವರು ಶಾಲೆಯ ಆಗು ಹೋಗು, ಮುಂದಿನ ಯೋಜನೆಗಳ ಬಗ್ಗೆ, ಬರುವಂತಹ ಖರ್ಚು ವೆಚ್ಚ ಹಾಗೂ ಈ ತನಕ ನೀಡಿರುವ ಕೊಡುಗೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು. ದುಬೈನಲ್ಲಿ ಅನಿವಾಸಿ ಭಾರತೀಯರಾಗಿ ದುಡಿಯುತ್ತಿರುವ ಹೊನ್ನಾಳ ಸರಕಾರಿ ಶಾಲೆಯ ಶೇಕಡಾ 90 ರಷ್ಟು ಹಳೆ ವಿದ್ಯಾರ್ಥಿಗಳು ಹಾಗೂ ಶಾಲಾ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಂದಂತಹ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಗೆದ್ದ ತಂಡಗಳಿಗೆ ಹಾಗೂ ಫೈನಲ್ ಪಂದ್ಯದ ಮ್ಯಾನ್ ಆಫ್ ದ ಮ್ಯಾಚ್ ಹಾಗೂ ಮ್ಯಾನ್ ಆಫ್ ದ ಸೀರೀಸ್ ಆಗಿ ನಯಾಜ್.ಜೆ, ಬೆಸ್ಟ್ ಬೌಲರ್ ಆಗಿ ಸಿರಾಜ್ ಬೆಂಗ್ರೆ, ಬೆಸ್ಟ್ ಕ್ಯಾಚರ್ ಆಗಿ ಇಂಬ್ರೆಜ್ ಸಾಹೇಬ್ ಹಾಗೂ ಬೆಸ್ಟ್ ಸಿಕ್ಸರರ್ ಆಗಿ ವಸೀಮ್ ಅಬ್ಬಾಸ್ ರವರು ಪ್ರಶಸ್ತಿ ಪಡೆದುಕೊಂಡರು.

ಇನ್ನೂ ರಹಮತ್.ಜೆ, ಅಯಾಜ್ ಖಾನ್ ಹಾಗೂ ವಸೀಮ್ ಪಂದ್ಯಾಕೂಟದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡು, ಪಿಕ್ಚರ್ಸ್ ಹಾಗೂ ಗ್ರೌಂಡ್ ನ ವ್ಯವಸ್ಥೆ ಮಾಡಿ ಪಂದ್ಯಾಕೂಟದ ಯಶಸ್ವಿಗೆ ಕಾರಣಕರ್ತರಾದರು. ಫೀರೋಜ್ ಖಾಜಿ ಕಾರ್ಯಕ್ರಮ ನಿರೂಪಿಸಿದರು.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ