ಬ್ರಹ್ಮಾವರ - ಮಾಬುಕಳ ಪರಿಸರದಲ್ಲಿ ಇತಿಹಾಸ ನಿರ್ಮಿಸಿದ ಅಂಡರ್ 13 ಕ್ರಿಕೆಟ್ ಸರಣಿ

ವರದಿ: ಖಲೀಲ್ ಕೆರಾಡಿ/ಕರಾವಳಿ ಕರ್ನಾಟಕ ವರದಿ
ಬ್ರಹ್ಮಾವರ
: ಲೇದರ್ ಬಾಲ್ ಕ್ರಿಕೆಟ್ ನಲ್ಲಿ ಯುವ ಪ್ರತಿಭೆಗಳನ್ನು ತರಬೇತಿ ನೀಡಿ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವ ಉದ್ದೇಶವನ್ನು ಇಟ್ಟುಕೊಂಡು ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜ್ ಬ್ರಹ್ಮಾವರದ ಪ್ರಾಧ್ಯಾಪಕರು ಹಾಗೂ ಕ್ರಿಕೆಟ್ ಕೋಚ್ ಆಗಿರುವ ವಿಜಯ್ ಆಳ್ವರವರ ಮುಂದಾಳತ್ವದ ಬೆಳ್ಳಿಪಾಡಿ ಕ್ರಿಕೆಟ್ ಅಕಾಡೆಮಿ ಬ್ರಹ್ಮಾವರ, ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ಹಾಗೂ ಚೇತನ ಹೈ ಸ್ಕೂಲ್ ನ ಸಹಭಾಗಿತ್ವದೊಂದಿಗೆ ಜನವರಿ 26 ರಂದು ಗಣರಾಜ್ಯೋತ್ಸವದ ಪ್ರಯುಕ್ತ 13 ವರ್ಷಗಳ ಕೆಳಗಿನ ವಯೋಮಿತಿಯವರಿಗೆ  "ರಿಪಬ್ಲಿಕ್ ಡೇ ಕಪ್" ಎಂಬ ನಾಲ್ಕು ಪಂದ್ಯಗಳ ಸರಣಿಯನ್ನು ಚೇತನ ಹೈ ಸ್ಕೂಲ್ ಮೈದಾನ ಮಾಬುಕಳದಲ್ಲಿ ಆಯೋಜಿಸಲಾಗಿತ್ತು.


ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ತಂಡ 4 ಪಂದ್ಯಗಳ ಸರಣಿಯಲ್ಲಿ 3 ರಲ್ಲಿ ಗೆಲುವು ಸಾಧಿಸುವ ಮುಖೇನ ಸರಣಿಯನ್ನು ವಶಪಡಿಸಿಕೊಂಡಿತ್ತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕುಮ್ದಾವತಿ ಡಿ.ಎಡ್ ನ ಕಾಲೇಜ್ ಕೊಕ್ಕರ್ಣೆಯ ಪ್ರಾಂಶುಪಾಲರು ಆದ ಶ್ರೀ ಸುರೇಶ್ ಕೆ.ಆರ್ ಶೆಟ್ಟಿ, ಅತಿಥಿಗಳಾಗಿ ಪ್ರೊಫೆಸರ್ ಬಾಲಕೃಷ್ಣ ಶೆಟ್ಟಿ, ಮ್ಯಾನೇಜ್ಮೆಂಟ್ ಕಾಲೇಜ್ ನ ಪ್ರಾಂಶುಪಾಲರು ಆದ ಬಿ.ಡಿ.ಶೆಟ್ಟಿ, ಚೇತನ ಹೈ ಸ್ಕೂಲ್ ಕಾರ್ಯದರ್ಶಿ ಶ್ರೀ ಇಬ್ರಾಹಿಮ್ ಸಾಹೇಬ್, ಚೇತನ ಹೈ ಸ್ಕೂಲ್ ನ ದೈಹಿಕ ಶಿಕ್ಷಕರಾದ ಹರ್ಷವರ್ಧನ ಶೆಟ್ಟಿ , ಬಿಎಬಿಸಿಯ ಪ್ರಧಾನ ಕೋಚ್ ವಿಜಯ್ ಆಳ್ವ ಹಾಗೂ ಕೆಆರ್ ಎಸ್ ಸಿಎಯ  ಉದಯ್ ಕುಮಾರ್ ವೈ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 ಸಮಾರೋಪ ಸಮಾರಂಭದಲ್ಲಿ ಭರತ್ ಕುಮಾರ್ ಶೆಟ್ಟಿ ಅಧ್ಯಕ್ಷರು ಚೇತನಾ ಮ್ಯಾನೇಜ್ಮೆಂಟ್ ಕಾಲೇಜ್ ಮಾಬುಕಳ, ಇವರು ಮಾತನಾಡಿ ಪಂದ್ಯಾಕೂಟದ ಬಗ್ಗೆ ಶ್ಲಾಘಿಸಿದರು ಹಾಗೂ ಬಿಎಸಿಎ ಕ್ರಿಕೆಟ್ ಅಕಾಡೆಮಿ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು ಹಾಗೂ ತಮ್ಮ ಸಹಕಾರ ಸದಾ ಇರುವುದಾಗಿ ತಿಳಿಸಿದರು. ಇನ್ನೂ  ಖಲೀಲ್ ಕೆರಾಡಿ ಅಧ್ಯಕ್ಷರು ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್  ತಮ್ಮ ಅನಿಸಿಕೆಗಳನ್ನು ಇಡುತ್ತ ಬ್ರಹ್ಮಾವರ- ಮಾಬುಕಳ ಪರಿಸರದಲ್ಲಿ ಇಂತಹ ಕ್ರೀಡಾ ಕೂಟವನ್ನು ಆಯೋಜಿಸಿ ಇತಿಹಾಸ ನಿರ್ಮಿಸಿದ ಪ್ರಾಯೋಜಕರನ್ನು ಅಭಿನಂದಿಸಿದ್ದು ಮಾತ್ರವಲ್ಲದೆ, ರಾಷ್ಟ್ರೀಯ ತಂಡ ಮಾತ್ರ ಉದ್ದೇಶವಾಗಿಟ್ಟುಕೊಳ್ಳದೆ, ರಣಜಿ, ಕೆಪಿಎಲ್, ಸಿಸಿಎಲ್, ಇಂಡಿಯನ್ ಪ್ರೀಮಿಯರ್ ಲೀಗ್ ನಂತಹ ಪಂದ್ಯಾಕೂಟದಲ್ಲು ಅವಕಾಶ ದೊರೆತರು ಉತ್ತಮ ಎಂಬ ಮನೋಭಾವನೆಯಿಂದ, ಯುವ ಪ್ರತಿಭೆಗಳಿಗೆ ಹೆತ್ತವರು ಕ್ರಿಕೆಟ್ ತರಬೇತಿ ಪಡೆಯುವಂತೆ ‌ಪ್ರೋತ್ಸಾಹಿಸಿಬೇಕು ಎಂದು ಹೇಳಿದರು. ಗಣೇಶ್ ಜಿ. ಪ್ರಾಂಶುಪಾಲರು ಚೇತನ ಕಾಲೇಜ್, ಸುನೀಲ್ ಕುಮಾರ್ ಕಲ್ಯಾಣಿ ಸ್ಪೋರ್ಟ್ಸ್, ಪ್ರಶಾಂತ್ ಕುಂದರ್ ಪ್ರಧಾನ ಕಾರ್ಯದರ್ಶಿ ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ಉಪಸ್ಥಿತರಿದ್ದರು.  ಫೈನಲ್ ಪಂದ್ಯದ ಮ್ಯಾನ್ ಆಫ್ ದ ಮ್ಯಾಚ್ ಆಗಿ ಕೆಆರ್ ಎಸ್ ನ ವಿನೀತ್, ಬೆಸ್ಟ್ ಬೌಲರ್‌ ಆಗಿ ಬಿಎಸಿಎಯ ಶ್ರೀ ಹರಿ, ಕ್ರಮವಾಗಿ ಕೆಆರ್ ಎಸ್ ನ  ಆದಿತ್ಯ ಶೆಟ್ಟಿ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಹಾಗೂ ಆರ್ಯನ್ ಮ್ಯಾನ್ ಆಫ್ ದ ಸೀರೀಸ್ ಆಗಿ ಅತಿಥಿಗಳಿಂದ ಪ್ರಶಸ್ತಿ ಸ್ವೀಕರಿಸಿದರು. ಪ್ರತಿ ಪಂದ್ಯದಲ್ಲಿ ಮ್ಯಾನ್ ಆಫ್ ದ ಮ್ಯಾಚ್ ನೀಡಿ ಗೌರವಿಸಲಾಯಿತು.
ವಿಜಯ್ ಆಳ್ವ ನಿರೂಪಿಸಿ, ಸ್ವಾಗತಿಸಿದರು, ಉದಯ್ ಕುಮಾರ್ ಧನ್ಯವಾದ ಕೋರಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ