ಬಿಜೆಪಿ ನಾಯಕರು ಬೇರೆ ಸಮುದಾಯದ ಸ್ತ್ರೀಯರನ್ನು ಮದುವೆಯಾಗಿ ಸುಖವಾಗಿಲ್ಲವೆ? ಹೆಗಡೆಗೆ ಭೀಮಣ್ಣ ನಾಯ್ಕ್ ಪ್ರಶ್ನೆ

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ
ಕಾರವಾರ
: ಹಿಂದೂ ಹೆಣ್ಣು ಮಕ್ಕಳನ್ನು ಮುಟ್ಟಿದವರ ಕೈಗಳನ್ನು ಕತ್ತರಿಸಿ ಎನ್ನುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ತಮಗೆ ಬರುವ ಗೌರವಧನವನ್ನು ತಿರಸ್ಕರಿಸಲಿ ನೋಡೋಣ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ಸವಾಲು ಹಾಕಿದ್ದದಾರೆ.

ಕಾರವಾರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಭಾರತದಲ್ಲಿ ಎಷ್ಟು ಮಹಿಳೆಯರಿದ್ದಾರೆ ಎನ್ನುವ ಮಾಹಿತಿ ನಿಮಗೆ ಇದೆಯೇ? ಎಂದು ಪ್ರಶ್ನಿಸಿದರು. ಚುನಾವಣೆ ಸಮೀಪಿಸಿದಾಗ ನಿಮಗೆ ಧರ್ಮದ ನೆನಪಾಗುತ್ತದೆ. ಸಂಸದರಿಗೆ ನೀಡುವ ಗೌರವಧನವು ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೆ ಸೇರಿದ್ದಾಗಿದೆ. ಧರ್ಮದಲ್ಲಿ ಹಿಂದೂ-ಮುಸ್ಲಿಂ ಎಂದು ವಿಂಗಡಿಸುವ ನೀವು ರಾಜಧನವನ್ನೂ ತಿರಸ್ಕರಿಸಿ ನೋಡೋಣ ಎಂದು ಸವಾಲು ಹಾಕಿದರು.

ಬಿಜೆಪಿಯ ಅನೇಕ ಮುಖಂಡರು ಬೇರೆ ಸಮುದಾಯಗಳ ಸ್ತ್ರೀಯರನ್ನು ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ ಎನ್ನುವುದನ್ನು ಗಮನಿಸಿಕೊಂಡು ನೀಡುವ ಹೇಳಿಕೆಗಳು ಇತಿಮಿತಿಯಲ್ಲಿ ಇಟ್ಟುಕೊಳ್ಳಬೇಕು. ಜವಾಬ್ದಾರಿಯುತ ಸಂಸದರಾಗಿ ನೀಡುವ ಇಂತಹ ಹೇಳಿಕೆಗಳಿಂದ ದೇಶಕ್ಕೆ ಅಭದ್ರತೆ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ನಿಮ್ಮ ನಾಯಕರೇ ಜೈಲಿಗೆ ಹೋದವರು:
ನಮ್ಮ ಪಕ್ಷದ ರಾಹುಲ್ ಗಾಂಧಿ, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ ಅವರ ಮೇಲೆ ಇಲ್ಲ ಸಲ್ಲದ ಆಪಾದನೆಗಳನ್ನು ಮಾಡುವ ಮೊದಲು ನಿಮ್ಮ ನಾಯಕರೇ ಜೈಲಿಗೆ ಹೋಗಿ ಬಂದವರು ಎನ್ನುವುದನ್ನು ನೆನಪಿಡಬೇಕು. ಅದು ಬಿಟ್ಟು ನಮ್ಮ ಪಕ್ಷದ ಮುಖಂಡರ ಮೇಲೆ ವೃಥಾ ಆರೋಪ ಮಾಡುವ ನೈತಿಕ ಹಕ್ಕು ನಿಮಗೆ ಇಲ್ಲ ಇಲ್ಲ ಎಂದು ಭೀಮಣ್ಣ ಕಿಡಿಕಾರಿದರು..

ಕ್ಷೇತ್ರಕ್ಕೆ ನೀವೇನು ಕೊಡುಗೆ ನೀಡಿದ್ದೀರಿ?
ಕಂದಾಯ ಸಚಿವ ಆರ್.ವಿ.ದೇಶಪಾಂಡೆಯವರನ್ನು ಪರ್ಸಂಟೇಜ್ ಪಾಂಡೆ ಆಪಾದನೆ ಮಾಡಿರುವ ಅನಂತಕುಮಾರ್ ಹೆಗಡೆ ಸಂಸದರಾಗಿ ಈ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಿ. ಸಂಸದರಾಗಿ ತಮಗೆ ಜವಾಬ್ದಾರಿ ಇದೆ ಎನ್ನುವುದನ್ನು ಮರೆತು ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತ, ಇಲ್ಲಸಲ್ಲದ ಹೇಳಿಕೆಗಳ ಮೂಲಕ ಜಿಲ್ಲೆಯ ಜನರ ನೆಮ್ಮದಿ ಕೆಡಿಸಲು ಸಂಸದ ಅನಂತ ಕುಮಾರ ಹೆಗಡೆ ಪ್ರಯತ್ನಿಸುತ್ತಿದ್ದು ಬೆಂಕಿ ಹೊತ್ತಿಸುವುದೇ ತಮ್ಮ ಸಾಧನೆ ಎಂಬಂತೆ ವರ್ತಿಸುತ್ತಿದ್ದಾರೆ. ನಾನು ದೇಶಪಾಂಡೆಯವರಿಗೆ ಹೇಳಿ ಅವರು ಎಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎನ್ನುವುದನ್ನು ಜನರ ಮುಂದೆ ತರಲು ಹೇಳುತ್ತೇನೆ. ಅದೇ ರೀತಿ ಸಂಸದರು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಗುಡ್ಡಗಾಡು ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರದಿಂದ ಎಷ್ಟು ಅನುದಾನ ತಂದಿದ್ದಾರೆ? ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಂಭು ಶೆಟ್ಟಿ, ಕೆ.ಎಚ್.ಗೌಡ ಮುಂತಾದವರು ಇದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ