ನಡುಮಧ್ಯಾಹ್ನ ರಾಡ್‌ಗಳಿಂದ ಮಾರಾಮಾರಿ ನಡೆಸಿದ ಭಂಡಾರ್ಕಾರ್ಸ್ ಕಾಲೇಜು ವಿದ್ಯಾರ್ಥಿಗಳು!

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಬೆಂಗಳೂರು ಮುಂತಾದ ಕಡೆ ಹಾಡು ಹಗಲೆ ರಸ್ತೆಯಲ್ಲಿ ರೌಡಿಗಳು ರಾಡ್, ತಲವಾರುಗಳಿಂದ ಹಲ್ಲೆ ನಡೆಸುವ ಭೀಕರ ದೃಶ್ಯಗಳನ್ನು ನೀವು ಕಂಡಿದ್ದೀರಿ. ಆದರೆ ಇಂದು ಕರಾವಳಿಯ ಕುಂದಾಪುರ ನಗರದಲ್ಲಿಯೂ ಇಂತಹುದೆ ದೃಶ್ಯಗಳನ್ನು ಕಂಡ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.

ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾದ ತಂಡವೊಂದು ಇಬ್ಬರ ಮೇಲೆ ಸಾಮೂಹಿಕವಾಗಿ ರಾಡುಗಳಿಂದ ಹಲ್ಲೆ ನಡೆಸಿದ್ದಾರೆ. ಜನನಿಬಿಡವಾದ ಕಾಲೇಜು ರಸ್ತೆಯಲ್ಲೆ ಈ ಹಲ್ಲೆ ನಡೆದಿದ್ದು ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ. ಈ ಮಾರಾಮಾರಿಯ ವಿಡಿಯೊ ಕ್ಲಿಪಿಂಗ್‌ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವಿದ್ಯಾರ್ಥಿಗಳ ಈ ಭೀಕರ ಹಲ್ಲೆ ಸಾರ್ವಜನಿಕರು ನೋಡುತ್ತಿರುವ ಸಮಯದಲ್ಲೆ ನಡೆದಿದೆ.

ಕಳೆದ ಕೆಲ ದಶಕಗಳಿಂದ ಶಾಂತವಾಗಿದ್ದ ಭಂಡಾರ್ಕಾರ್ಸ್ ಕಾಲೇಜು ಈಗ ಈ ವಿದ್ಯಾರ್ಥಿಗಳ ಹಲ್ಲೆಯಿಂದ ಮತ್ತೆ ಹಿಂದಿನ ಗಲಾಟೆಯ ದಿನಗಳನ್ನು ನೆನಪಿಸುವಂತೆ ಮಾಡಿದೆ.

https://www.youtube.com/watch?v=gXHlyy1-eT8

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ