ಕನ್ನಡ ಸಾಹಿತಿ ಜಯಂತ್​ ಕಾಯ್ಕಿಣಿಗೆ ದಕ್ಷಿಣ ಏಷ್ಯಾ ಡಿಎಸ್​ಸಿ ಪ್ರಶಸ್ತಿ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ದಕ್ಷಿಣ ಏಷ್ಯಾ ಡಿಎಸ್​ಸಿ ಪ್ರತಿಷ್ಠಿತ ಪ್ರಶಸ್ತಿಗೆ ಕನ್ನಡದ ಕವಿ, ಕತೆಗಾರ, ಲೇಖಕ ಜಯಂತ್​ ಕಾಯ್ಕಿಣಿ ಭಾಜನರಾಗಿದ್ದಾರೆ.

ಜಯಂತ್​ ಕಾಯ್ಕಿಣಿ ಅವರ ನೋ ಪ್ರೆಸೆಂಟ್ಸ್​​ ಪ್ಲೀಸ್​ (No Presents Please)ಕಥಾ ಸಂಕಲನಕ್ಕೆ ಈ ಪ್ರಶಸ್ತಿ ಸಿಕ್ಕಿದ್ದು, ತೇಜಸ್ವಿನಿ ನಿರಂಜನ್​ ಅವರು ಇಂಗ್ಲಿಷ್​ಗೆ ಭಾಷಾಂತರ ಮಾಡಿದ್ದರು.

ಪ್ರಶಸ್ತಿ 25000 ಯುಎಸ್​ ಡಾಲರ್​ನ್ನು ಒಳಗೊಂಡಿದೆ. ಪಾಕಿಸ್ತಾನ ಮೂಲದ ಕಮಿಲಾ ಶಮ್ಸೀಸ್​ ಅವರ ಹೋಮ್​ ಫೈರ್​ ಮತ್ತು ನೀಲ್​ ಮುಖರ್ಜಿಯವರ ಸ್ಟೇಟ್​ ಆಫ್​ ಫ್ರೀಡಂಗಳು ಕೂಡ ಈ ಪ್ರಶಸ್ತಿ ಆಯ್ಕೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.

1980-90ರ ದಶಕದಲ್ಲಿ ಮುಂಬೈ ಕುರಿತು ಜಯಂತ್​ ಕಾಯ್ಕಿಣಿ ಬರೆದ ಕಥಾ ಸಂಕಲನಗಳು ಕನ್ನಡದಲ್ಲಿ ಪ್ರಕಟವಾಗಿದ್ದವು. ಮುಂಬೈನಲ್ಲಿ ಎರಡು ದಶಕಗಳ ಕಾಲ ವಾಸವಾಗಿದ್ದ ಜಯಂತ್​ ಕಾಯ್ಕಿಣಿಯವರು ಅಲ್ಲಿನ ಜನಜೀವನದI ಬಗ್ಗೆ ಬರೆದ ಕತೆಗಳ ಗುಚ್ಛವನ್ನು ಇದು ಒಳಗೊಂಡಿದೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ