ಉ.ಕ. ಹಾಗೂ ದ.ಕ. ಜಿಲ್ಲಾಧಿಕಾರಿಗಳಿಗೆ ಸ್ಯಾಟಲೈಟ್ ಫೋನ್

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ

ಕಾರವಾರ:
ರಾಜ್ಯದ ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸರಕಾರವು ಸ್ಯಾಟಲೈಟ್ ಫೋನ್‌ಗಳನ್ನು ವಿತರಿಸಿದ್ದು ಈ ಮೂಲಕ ತುರ್ತು ಪರಿಸ್ಥಿತಿಗಳಲ್ಲಿ ಸಂಪರ್ಕ ಸಾಧಿಸಲು ಇದು ನೆರವಾಗಲಿದೆ.

ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂತಲಿ ಸ್ಯಾಟ್‌ಲೈಟ್ ಫೋನ್ ಪಡೆದಿದ್ದಾರೆ. ಇದಲ್ಲದೇ ಬೆಂಗಳೂರು ಮುಖ್ಯ ಕಾರ್ಯದರ್ಶಿ ಕಚೇರಿಗೆ ಒಂದು ಸ್ಯಾಟಲೈಟ್ ಫೋನ್ ಒದಗಿಸಲಾಗಿದೆ.

ಉಪಗೃಹ(ಸ್ಯಾಟಲೈಟ್) ಆಧಾರಿತವಾಗಿ ಈ ಫೋನ್ ಕಾರ್ಯ ನಿರ್ವಹಿಸಲಿದ್ದು ಇದರ ವಿಶೇಷತೆ ಎಂದರೆ ಸಾಮಾನ್ಯ ಮೊಬೈಲ್‌ಗೆ ನೆಟ್‌ವರ್ಕ್ ಇಲ್ಲದ ಸಮಯದಲ್ಲಿಯೂ ಈ ಫೋನ್ ಮೂಲಕ ಕರೆ ಮಾಡಬಹುದಾಗಿದೆ. ಪೃಕೃತಿ ವಿಕೋಪ ಸಂಭವಿಸಿದಾಗ ಸೇರಿದಂತೆ ಕೆಲವು ಸಂದರ್ಭಗಳಲ್ಲಿ ಮೊಬೈಲ್ ಟವರ್ ಜಾಮ್ ಆಗುವ ಅಥವಾ ಸಂಪರ್ಕ ಕಡಿತಗೊಳ್ಳುವ ಅವಕಾಶ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಂಪರ್ಕ ಸಾಧನಕ್ಕಾಗಿ ಈ ಫೋನ್ ಬಳಸಬಹುದಾಗಿದೆ. ಈ ಫೋನ್‌ಗೆ ಬಿಎಸ್‌ಎನ್‌ಎಲ್ ಸಿಮ್ ಅಳವಡಿಸಲಾಗಿದೆ. ಹೊರ ಹೋಗುವ ಒಂದು ನಿಮಿಷದ ಕರೆಗೆ 140 ರೂ. ಹಾಗೂ ಒಳ ಬರುವ ಕರೆಗೆ 40ರೂ. ಶುಲ್ಕ ತಗಲುತ್ತದೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ರಾಜ್ಯದ ಕರಾವಳಿ ಜಿಲ್ಲೆಗಳಾಗಿದ್ದು ಸಮುದ್ರ ತೀರದ ಪ್ರದೇಶವನ್ನು ಹೊಂದಿವೆದೀ ಹಿನ್ನೆಲೆಯಲ್ಲಿ ಇಲ್ಲಿ ತುರ್ತು ಸಂದೇಶ ರವಾನೆ ಅನಿವಾರ್ಯ ಎನಿಸಿದ್ದರಿಂದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟಿರಿಂಗ್ ಕೇಂದ್ರದವರು ಈ ಫೋನ್ ವಿತರಿಸಿದ್ದಾರೆ. ಈ ಸ್ಯಾಟ್‌ಲೈಟ್ ಫೋನ್ ಮೂಲಕ ಯಾವುದೇ ನೆಟ್ವರ್ಕಗಳಿಗೂ ಕರೆ ಮಾಡಬಹುದಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ