ಶಾಸಕರನ್ನು ಹೋಟೆಲ್‌‌ನಲ್ಲಿ​ ಕೂಡಿಹಾಕಿ ಕಾಯುವ 'ಚೌಕಿದಾರ'ರಾದ ಮೋದಿ: ಸಿದ್ದರಾಮಯ್ಯ ವ್ಯಂಗ್ಯ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ರಾಜ್ಯದ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಬಿಜೆಪಿ ನಾಯಕರ ನಡೆಯನ್ನು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರೂ ಕೂಡ ಆಗಿರುವ ಸಿದ್ದರಾಮಯ್ಯ ಅವರು ತೀವ್ರ ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, 'ಆಪರೇಷನ್​ ಕಮಲ ಮಾಡುವುದು ಬಿಜೆಪಿಗೆ ಹೊಸತೇನಲ್ಲ. ಬಿಜೆಪಿಯವರು ಮೊದಲಿನಿಂದಲೂ ಈ ಪ್ರಯತ್ನ ಮಾಡಿಕೊಂಡು ಬಂದಿದ್ದಾರೆ. ಸರ್ಕಾರವನ್ನು ಕೆಡವಲು ಪ್ರಯತ್ನಿಸುತ್ತಲೇ ಇದ್ದಾರೆ. ಅವರು ಏನೇ ಮಾಡಿದರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ. ಅಲ್ಲದೆ "ಗಂಧಾ ನೀಯತ್​, ರೆಸಾರ್ಟ್​ ವಿಕಾಸ್​," ಎಂದು ಕಿಡಿಕಾರಿದ್ದಾರೆ.

ಅಂತೆಯೇ 'ರಾಜ್ಯ ಸರ್ಕಾರ ಸುಭದ್ರವಾಗಿದೆ. 2-3 ಶಾಸಕರಷ್ಟೇ ಮುಂಬೈಗೆ ಹೋಗಿದ್ದಾರೆ. ಉಳಿದಿದ್ದೆಲ್ಲ ಕೇವಲ ಊಹಾಪೋಹ. ಬಿಜೆಪಿಯವರು ಶಿವಳ್ಳಿ ಸೇರಿ ಹಲವರಿಗೆ ಗಾಳ ಹಾಕಿದ್ದಾರೆ. ಜೊತೆಗೆ ದೊಡ್ಡ ಮಟ್ಟದ ಹಣದ ಆಮಿಷವೊಡ್ಡಿದ್ದಾರೆ. ಹೀಗೆಲ್ಲ ಮಾಡಿದರೆ ಸರ್ಕಾರ ಉರುಳುತ್ತದೆ, ಅಧಿಕಾರ ಸಿಗುತ್ತದೆ ಎಂದು ಬಿಜೆಪಿ ಭಾವಿಸಿದೆ. ಆದರೆ, ಅದು ತಪ್ಪು ಕಲ್ಪನೆ. ಬಿಜೆಪಿ ಅಸಹಾಯಕ ಸ್ಥಿತಿ ತಲುಪಿದಾಗೆಲ್ಲ ರೆಸಾರ್ಟ್​ ರಾಜಕಾರಣಕ್ಕೆ ಮತ್ತು ಆಪರೇಷನ್​ ಕಮಲಕ್ಕೆ ಮೊರೆ ಹೋಗುತ್ತದೆ. ಇದೇನು ಹೊಸತಲ್ಲ, ಆದರೆ ಬಿಜೆಪಿಯ ಪ್ರಯತ್ನ ಮತ್ತೆ ವಿಫಲವಾಗಲಿದೆ ಎಂದು ಟೀಕಿಸಿದ್ದಾರೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ