ಮಂಗಳೂರು: ‘ಅಂದರ್-ಬಾಹರ್’ 86.47ಲಕ್ಷ ರೂ. ಸೊತ್ತು ವಶ, 21 ಆರೋಪಿಗಳ ಸೆರೆ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಅಡ್ಯಾರ್ ಗ್ರಾಮದ ಸುರೇಶ್ ಶೆಟ್ಟಿ ಮಾಲಕತ್ವದ ‘ಅಡ್ಯಾರ್ ಹಿಲ್ಸ್’ ಹೋಂಸ್ಟೇಯಲ್ಲಿ ‘ಅಂದರ್-ಬಾಹರ್’ ಜೂಜಿನಲ್ಲಿ ನಿರತವಾಗಿದ್ದ ಆರೋಪದಲ್ಲಿ ಇಪ್ಪತ್ತೊಂದು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಮಹತ್ವದ ಕಾರ್ಯಾಚರಣೆ ವರದಿಯಾಗಿದೆ.

ಪಿ.ಎಸ್ಸೈ ಕಬ್ಬಾಳ್ ರಾಜ್ ನೇತೃತ್ವದ ತಂಡ ಖಚಿತ ಮಾಹಿತಿ ಅನುಸರಿಸಿ ಮಿಂಚಿನ ದಾಳಿ ನಡೆಸಿತ್ತು.
ದಾಳಿ ಸಂದರ್ಭ ಜೂಜಿಗೆ ಬಳಸಿದ 18,37,000ರೂ. ಮತ್ತು 66,75,000ರೂ. ಮೌಲ್ಯದ ಎಂಟು ಕಾರುಗಳು ಹಾಗೂ ಆಟೋರಿಕ್ಷಾ ಮತ್ತು 1,35,700 ರೂ. ಮೌಲ್ಯದ ಇಪ್ಪತ್ನಾಲ್ಕು ಮೊಬೈಲ್ ವಶಪಡಿಸಿಕೊಂಡಿದ್ದು, ಸ್ವಾಧೀನಪಡಿಸಿದ ಸೊತ್ತುಗಳ ಮೌಲ್ಯ ರೂ,86,47,700 ಎಂದು ಅಂದಾಜಿಸಲಾಗಿದೆ.

ದಾಳಿ ಸಂದರ್ಭ ಹೋಂಸ್ಟೇ ಮಾಲಕ ಸುರೇಶ್ ಶೆಟ್ಟಿ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ಮೆಲ್ವಿನ್ ವಿಶ್ವಾಸ್ ಡಿ’ಸೋಜ, ಶರತ್ ಕುಮಾರ್, ಗುರುಪ್ರಸಾದ್, ರಾಜ ಪೂಜಾರಿ, ಮೊಹ್ಮದ್ ಹನೀಫ್. ಶಿವರಾಜ್, ಅನ್ವರ್, ಆದರ್ಶ, ರಾಧಾಕೃಷ್ಣ ನಾಯರ್, ಆರ್ವಿನ್ ಡಿ’ಸೋಜ, ಮಹದೇವಪ್ಪ, ಕುಮಾರನಾಥ ಶೆಟ್ಟಿ, ಗಣೇಶ್ ವಿ.ಎಸ್, ಆಲ್ವಿನ್ ರಿಚ್ಚರ್ಡ್, ಪ್ರೀತಂ ಆಲಿಯಾಸ್ ಪ್ರಶಾಂತ್, ಸಾವನ್, ನಿತಿನ್ ಡಿ’ಸೋಜ, ಅಬೀದ್ ಹುಸೈನ್, ಡೆಂಝಿಲ್ ವಿಕ್ಸನ್ ಡಿ’ಸೋಜ, ಮೊಹ್ಮದ್ ಹನೀಫ್ ಎಂದು ಆರೋಪಿಗಳನ್ನು ಗುರುತಿಸಲಾಗಿದ್ದು, ಆರೋಪಿಗಳನ್ನು ಮತ್ತು ವಶಪಡಿಸಿಕೊಂಡ ಸೊತ್ತುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ