7 ಮೀನುಗಾರರ ಪತ್ತೆಗಾಗಿ ಆಗ್ರಹಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆಗೆ ಚಾಲನೆ

ಕರಾವಳಿ ಕರ್ನಾಟಕ ವರದಿ

ಉಡುಪಿ
: 22 ದಿನಗಳ ಹಿಂದೆ  ನಾಪತ್ತೆಯಾಗಿರುವ 7 ಮಂದಿ ಮೀನುಗಾರರ ಪತ್ತೆಗಾಗಿಆಗ್ರಹಿಸಿ ಸಾವಿರಾರು ಮೀನುಗಾರರು ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಮೀನುಗಾರರೆಲ್ಲ ಕಡಲಿಗಿಳಿಯದೆ ಪ್ರತಿಭಟನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇಳಿದ್ದಾರೆ.

ಮಲ್ಪೆಯಿಂದ ಕಾಲ್ನಡಿಗೆಯಲ್ಲಿ  ಹೊರಟ ಸಾವಿರಾರು ಮೀನುಗಾರರು ಅಂಬಲಪಾಡಿ ಬೈಪಾಸ್‌ಗೆ ಬಂದು ರಾಸ್ತಾ ರೋಕೋ ನಡೆಸಿದ್ದಾರೆ.

ಉಡುಪಿಯ ಉದ್ಯಮಿ ಮೊಗವೀರ ಸಮುದಾಯದ ಮುಂದಾಳು ಜಿ. ಶಂಕರ್ ಪ್ರತಿಭಟನೆಗೆ ಚಾಲನೆ ನೀಡಿದರು. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಹಲವೆಡೆಯ ಮೀನುಗಾರರು ಉಡುಪಿಯಲ್ಲಿ ಸೇರಿದ್ದು 50 ಸಾವಿರಕ್ಕೂ ಮಿಕ್ಕಿ ಜನರು ಸೇರುವ ನಿರೀಕ್ಷೆ ಇದೆ.

ಡಿಸೆಂಬರ್ 13ರಂದು ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 'ಸುವರ್ಣ ತ್ರಿಭುಜ' ಎಂಬ ಹೆಸರಿನ ಬೋಟ್ ನಾಪತ್ತೆಯಾಗಿತ್ತು. ಈ ಬೋಟ್‌ನಲ್ಲಿ ದಾಮೋದರ, ಲಕ್ಷ್ಮಣ, ಸತೀಶ, ಹರೀಶ, ರಮೇಶ, ಜೋಗಯ್ಯ, ರವಿ ಎಂಬ ಏಳು ಮೀನಿಗಾರರು ಇದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ